ಪಾದಯಾತ್ರೆಗೆ ನನ್ನ ವೈಯಕ್ತಿಕ  ವಿರೋಧವಿಲ್ಲ: ಹೈಕಮಾಂಡ್ ಜೊತೆ ಚರ್ಚೆ- ಬಿವೈ ವಿಜಯೇಂದ್ರ

ಬೆಳಗಾವಿ,ಜನವರಿ,16,2026 (www.justkannaa.in):  ಬಳ್ಳಾರಿ ಬ್ಯಾನರ್ ಗಲಾಟೆ ಖಂಡಿಸಿ ಬಿಜೆಪಿ ಪಾದಯಾತ್ರೆಯ ಗೊಂದಲ ಹಿನ್ನೆಲೆಯಲ್ಲಿ ಈ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಮಾತನಾಡಿರುವ ಬಿವೈ ವಿಜಯೇಂದ್ರ, ಶ್ರೀರಾಮುಲು  ಅವರ ಹೇಳಿಕೆ ಗಮನಿಸಿದ್ದೇನೆ.  ಪಾದಯಾತ್ರೆಗೆ ನನ್ನ ವೈಯಕ್ತಿಕ ವಿರೋಧ ಇಲ್ಲ. ಈ ಹಿಂದೆ ಪಾದಯಾತ್ರೆ ಮಾಡಿದಾಗ ಗೊಂದಲ ಸೃಷ್ಠಿಯಾಗಿತ್ತು. ಈಗ ಈ ರೀತಿಯ ಗೊಂದಲಕ್ಕೆ ಅವಕಾಶ ಕೊಡಬಾರದು. ಏನೇ ನಿರ್ಧಾರ ತೆಗದುಕೊಂಡರೂ ಕೇಂದ್ರದ ಗಮನಕ್ಕೆ ತರಬೇಕು ಎಂದರು.

ಬಿಜೆಪಿ ಹೊಸ ರಾಷ್ಟ್ರೀಯ ಅಧ್ಯಕ್ಷರ  ಆಯ್ಕೆ ನಡೆಯಲಿದೆ ಬಳಿಕ ಕೇಂದ್ರ ನಾಯಕರ ಜೊತೆಗೆ ಚರ್ಚೆ ಮಾಡುತ್ತೇನೆ ಎಂದು  ಬಿವೈ ವಿಜಯೇಂದ್ರ ತಿಳಿಸಿದರು.

Key words: Padayatra, Discussion , High Command, BY Vijayendra