ಬೆಳಗಾವಿ,ಡಿಸೆಂಬರ್,10,2025 (www.justkannada.in): ಉತ್ತರ ಕರ್ನಾಟಕ ಭಾಗದಲ್ಲಿ ಅಭಿವೃದ್ದಿಯಲ್ಲಿ ರಾಜ್ಯ ಸರ್ಕಾರ ಅಸಮತೋಲನ ತೋರಿದ್ದಕ್ಕೆ ಪ್ರತ್ಯೇಕ ರಾಜ್ಯದ ಕೂಗು ಬರುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಕಿಡಿ ಕಾರಿದರು.
ಇಂದು ಮಾತನಾಡಿದ ಬಿವೈ ವಿಜಯೇಂದ್ರ, ಉತ್ತರ ಕರ್ನಾಟಕ ಬಾಗದಲ್ಲಿ ನೀರಾವರಿ ಪ್ರವಾಸೋದ್ಯಮಕ್ಕೆ ರಾಜ್ಯ ಸರ್ಕಾರ ಸಹಕಾರ ಕೊಟ್ಟಿಲ್ಲ. ಕಾವೇರಿ ನದಿಗೆ ಸಿಗುವ ನ್ಯಾಯ ಕೃಷ್ಣೆಗೆ ಸಿಗುತ್ತಿಲ್ಲ. ಉತ್ತರ ಕರ್ನಾಟಕದಲ್ಲಿ ಕಬ್ಬು ಬೆಳೆಗಾರರ ಸಮಸ್ಯೆಗಳು ಕೂಡ ಇವೆ ಇದರ ನಡುವೆ ಸಿಎಂ ಕುರ್ಚಿಗಾಗಿ ಕಾಳಗ ನಡೆಯುತ್ತಿದೆ ಇದರ ಪರಿಣಾಮವಾಗಿ ರಾಜ್ಯದ ಸಮಸ್ಯೆಗಳ ಬಗ್ಗೆ ಆಗಲಿ ಉತ್ತರ ಕರ್ನಾಟಕ ಭಾಗದ ಜನರ ಬಗ್ಗೆ ಕಾಳಜಿ ತೋರುತ್ತಿಲ್ಲ. ಕೃಷಿಕರ ಮೇಲೆ ಸಿಎಂ ಸಿದ್ದರಾಮಯ್ಯಗೆಯಾಕೆ ಇಷ್ಟೊಂದು ಅಸಡ್ಡೆ ಗೊತ್ತಿಲ್ಲ? ರೈತರ ಸಮಸ್ಯೆಗಳಿಗೆ ಸಚಿವರು ಧಾವಿಸಬೇಕಿತ್ತು.
ಸಿಎಂ ಸಿದ್ದರಾಮಯ್ಯ ವೈಮಾನಿಕ ಸಮೀಕ್ಷೆ ಮಾಡಿದ್ದು ಸರಿ. ಸಚಿವರು ಕೂಡ ಹೆಲಿಕಾಪ್ಟರ್ ಮೂಲಕ ಹೋದರು. ಬೆಳೆಹಾನಿ ಸಮೀಕ್ಷೆ ಮಾಡಿದರೆ ಗ್ರೌಂಡ್ ರಿಪೋರ್ಟ್ ಬಂದಿಲ್ಲ ಅಂದ್ರೆ ಸಮಸ್ಯೆಗಳನ್ನು ಹೇಗೆ ಬಗೆಹರಿಸಲು ಸಾಧ್ಯ? ಎಂದು ಬಿವೈ ವಿಜಯೇಂದ್ರ ಪ್ರಶ್ನಿಸಿದರು.
Key words: demand, separate state, due, imbalance, development,BY Vijayendra Kidi







