ಶಿವಮೊಗ್ಗ,ಸೆಪ್ಟಂಬರ್,4,2025 (www.justkannada.in): ಜಿಎಸ್‍ಟಿ ಪರಿಷ್ಕರಣೆ ಮಾಡುವ ಮೂಲಕ ಕೇಂದ್ರ ಸರ್ಕಾರ ಐತಿಹಾಸಿಕ ನಿರ್ಧಾರ ತೆಗೆದುಕೊಂಡಿದೆ. ಈ ನೂತನ ಜಿಎಸ್‍ಟಿ ನೀತಿಯ ಬಗ್ಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಅಪಪ್ರಚಾರ ಮಾಡುವುದನ್ನು ನಿಲ್ಲಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತಿಳಿಸಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಬಿವೈ ವಿಜಯೇಂದ್ರ ಹೊಸ ಜಿಎಸ್ ಟಿ ನೀತಿಯಿಂದ ರಾಜ್ಯಕ್ಕೆ 14ರಿಂದ 15 ಸಾವಿರ ಕೋಟಿ ಆದಾಯ ನಷ್ಷವಾಗಿರಬಹುದು. ಆದರೆ ಒಟ್ಟಾರೆ ದೇಶದ ಆರ್ಥಿಕ ವ್ಯವಹಾರವನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ಈ ನೀತಿ ತಂದಿದೆ. ರಾಜ್ಯದ ಹಣಕಾಸನ್ನು ಯಾವ ರೀತಿ ಉತ್ತಮ ಪಡಿಸಬೇಕು. ಯಾವ ರೀತಿ ತೆರಿಗೆ ಹೆಚ್ಚು ಮಾಡುವ ಮೂಲಕ ಆದಾಯವನ್ನು ಹೆಚ್ಚಿಸಿಕೊಳ್ಳಬಹುದು ಎಂಬುದರ ಬಗ್ಗೆ ಸಿಎಂ ಸಿದ್ದರಾಮಯ್ಯ ಚಿಂತನೆ ಮಾಡಬೇಕು. ಪ್ರಧಾನಿ ನರೇಂದ್ರ ಮೋದಿಯವರ ಸ್ಪಷ್ಟ ಆರ್ಥಿಕ ನೀತಿ ಜಾಗತಿಕ ಮಟ್ಟದಲ್ಲಿ ಭಾರತ 4ನೇ ಸ್ಥಾನಕ್ಕೆ ಏರುವಂತೆ ಮಾಡಿದೆ ಎಂದು ತಿಳಿಸಿದರು. .
ರಾಜ್ಯದ ಹಿತ ಎಷ್ಟು ಮುಖ್ಯವೋ ದೇಶದ ಹಿತವೂ ಅಷ್ಟೇ ಮುಖ್ಯ ಎಂಬುದನ್ನ ಕಾಂಗ್ರೆಸ್ ನಾಯಕರು ತಿಳಿದುಕೊಳ್ಳಲಿ. ಎರಡೂವರೆ ವರ್ಷದಿಂದ ಕೇಂದ್ರದಿಂದ ವಿವಿಧ ಅನುದಾನ ಬರುತ್ತಿದ್ದರೂ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಕೇಂದ್ರ ಸರ್ಕಾರದ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ ಅದನ್ನ ಬಿಟ್ಟು ಕೇಂದ್ರ ಸರ್ಕಾರದೊಂದಿಗೆ ಸಹಕಾರ ನೀಡಬೇಕು ಎಂದರು.
Key words: Stop, spreading, misinformation , new, GST policy, BY Vijayendra