Friday, August 14, 2026

BDA Apartments

Home Front Page ಹಣ ವಸೂಲಿಗೆ ಸಿಎಂ ಆಪ್ತ ಸಚಿವರಿಗೆ ಟಾರ್ಗೆಟ್ ಕೊಟ್ಟಿದ್ದಾರೆ- ಬಿವೈ ವಿಜಯೇಂದ್ರ ಆರೋಪ

ಹಣ ವಸೂಲಿಗೆ ಸಿಎಂ ಆಪ್ತ ಸಚಿವರಿಗೆ ಟಾರ್ಗೆಟ್ ಕೊಟ್ಟಿದ್ದಾರೆ- ಬಿವೈ ವಿಜಯೇಂದ್ರ ಆರೋಪ

ಬೆಂಗಳೂರು,ಜೂನ್,24,2025 (www.justkannada.in): ಹಣ ವಸೂಲಿ ಮಾಡಲು  ಸಿಎಂ ಸಿದ್ದರಾಮಯ್ಯ ಆಪ್ತ ಸಚಿವರಿಗೆ ಟಾರ್ಗೆಟ್ ಕೊಟ್ಟಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಆರೋಪಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಬಿವೈ ವಿಜಯೇಂದ್ರ, ಎಷ್ಟು ಹಣ ವಸೂಲಿ ಮಾಡಬೇಕು ಅಂತಾ ಸಿಎಂ ಸಿದ್ದರಾಮಯ್ಯ ಆಪ್ತ ಸಚಿವರಿಗೆ ಟಾರ್ಗೆಟ್ ಕೊಟ್ಟಿದ್ದಾರೆ.  ಇದರಿಂದಾಗಿಯೇ ಬಿ. ನಾಗೇಂದ್ರ ಹಳ್ಳಕ್ಕೆ ಬಿದ್ದಿದ್ದು. ಮುಂದಿನ ಸರದಿ ಸಚಿವ ಜಮೀರ್ ಅವರದ್ದು ಎಂದು ಲೇವಡಿ ಮಾಡಿದರು.

ವರ್ಗಾವಣೆ ದಂಧೆಯಲ್ಲಿ ಸರಕಾರ ಮುಳುಗಿದೆ. ರಾಜ್ಯದ ಪರಿಸ್ಥಿತಿ ನೋಡಿ  ಮಲ್ಲಿಕಾರ್ಜುನ ಖರ್ಗೆ ಕೂಡ ಹತಾಶರಾಗಿದ್ದಾರೆ. ಗೌರವ ಇದ್ದರೇ ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು. ಇಲ್ಲದಿದ್ದರೇ ರಾಜ್ಯಪಾಲರು ಮಧ್ಯಪ್ರವೇಶ ಮಾಡಬೇಕು ಎಂದು ಬಿವೈ ವಿಜಯೇಂದ್ರ ಆಗ್ರಹಿಸಿದರು.vtu

Key words: CM,  close minister, target,  money, collection, BY Vijayendra