ದೊಡ್ಡ ಜವಾಬ್ದಾರಿ ನನ್ನ ಮೇಲಿದೆ: ಗೆದ್ದವರಿಗೆ ಸಚಿವ ಸ್ಥಾನ ಗ್ಯಾರಂಟಿ- ಅಭಯ ನೀಡಿದ ಸಿಎಂ ಬಿಎಸ್ ಯಡಿಯೂರಪ್ಪ…

ಬೆಂಗಳೂರು,ಡಿ,9,2019(www.justkannada.in):  ರಾಜ್ಯದ 15 ವಿಧಾನಸಭಾ ಕ್ಷೇತ್ರಗಳ ಪೈ 12 ಕ್ಷೇತ್ರಗಳಲ್ಲಿ ಭರ್ಜರಿ ಜಯಭೇರಿ ಬಾರಿಸುವ ಮೂಲಕ ಸಿಎಂ ಬಿಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಸೇಫ್ ಆಗಿದೆ. ಈ ನಡುವೆ ರಾಜ್ಯದ ಜನತೆಗೆ ಸಿಎಂ ಬಿಎಸ್ ಯಡಿಯೂರಪ್ಪ ಧನ್ಯವಾದ ಅರ್ಪಿಸಿದ್ದಾರೆ.

ಬಿಜೆಪಿ ಗೆಲುವಿನ ಬಗ್ಗೆ ಮಾಧ್ಯಮಗಳಲ್ಲ ಮಾತನಾಡಿದ ಸಿಎಂ ಬಿಎಸ್ ಯಡಿಯೂರಪ್ಪ, ಕಾರ್ಯಕರ್ತರ ಶ್ರಮದಿಂದ ಪಕ್ಷ ಗೆಲುವು ಸಾಧಿಸಿದೆ.  12 ಕ್ಷೇತ್ರದಲ್ಲಿ ಜನಾಶೀರ್ವಾದ ಮಾಡಿದ್ದಾರೆ. ಹೀಗಾಗಿ ರಾಜ್ಯದ ಜನತೆಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ತಿಳಿಸಿದರು.

ಗೆದ್ದವರಿಗೆ ಸಚಿವ ಸ್ಥಾನ ಗ್ಯಾರಂಟಿ…

ನನ್ನ ಮೇಲೆ ದೊಡ್ಡ ಜವಾಬ್ದಾರಿ ಇದೆ. ಗೆದ್ದವರಿಗೆ ಸಚಿವ ಸ್ಥಾನವನ್ನ ನೀಡುವುದು ಖಚಿತ.  ನನ್ನನ್ನ ನಂಬಿ ಬಂದವರಿಗೆ ಗ್ಯಾರಂಟಿ ಮಂತ್ರಿಗಿರಿ ಕೊಡುತ್ತೇವೆ. ಮೂರವರೆ ವರ್ಷ ಸ್ಥಿರ ಸರ್ಕಾರ ಕೊಡುತ್ತೇವೆ.  ಇನ್ಮುಂದೆ ಅಸ್ಥಿರ ಸರ್ಕಾರ ಅನ್ನೋದು ಬಿಡಿ. ರಾಜ್ಯದ ಅಭಿವೃದ್ದಿಗೆ ಸಹಕಾರ ನೀಡಿ ಎಂದು ವಿಪಕ್ಷ ನಾಯಕರಿಗೆ ಚಾಟಿ ಬೀಸಿದರು.

Key words: by election-won- bjp- cm bs yeddyurappa- biggest -responsibility