ಉಪಚುನಾವಣೆ: ಡಿಸಿಎಂ ಲಕ್ಷ್ಮಣ್ ಸವದಿ ಹಾಗೂ ಅನರ್ಹ ಶಾಸಕ ಆರ್.ಶಂಕರ್ ಸೇರಿ ಹಲವರಿಂದ ಮತದಾನ…

ಬೆಳಗಾವಿ,ಡಿ,5,2019(www.justkannada.in):  ರಾಜ್ಯದ ಬಹುನಿರೀಕ್ಷಿತ 15 ವಿಧಾನಸಭಾ ಕ್ಷೇತ್ರಗಳಿಗೆ ಇಂದು ಮತದಾನ ನಡೆಯುತ್ತಿದ್ದು ಹಲವು ರಾಜಕೀಯ ನಾಯಕರು ಮತಗಟ್ಟೆಗೆ ಆಗಮಿಸಿ ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ.

ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಬೆಳಗಾವಿ ಜಿಲ್ಲೆ ಅಥಣಿ ಕ್ಷೇತ್ರದ ನಾಗನೂರು ಪಿ.ಕೆ ಗ್ರಾಮದ ಮತಗಟ್ಟೆಯಲ್ಲಿ ತಮ್ಮ ಮತದಾನದ ಹಕ್ಕು ಚಲಾಯಿಸಿದರು. ಹಾಗೆಯೇ ಅನರ್ಹ ಶಾಸಕ ಆರ್.ಶಂಕರ್ ಅವರು ತಮ್ಮ ಪತ್ನಿ ಧನಲಕ್ಷ್ಮಿ ಜತೆ  ರಾಣಿಬೆನ್ನೂರು ಕ್ಷೇತ್ರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತಗಟ್ಟೆ ಸಂಖ್ಯೆ 135ಕ್ಕೆ ಆಗಮಿಸಿ ವೋಟಿಂಗ್ ಮಾಡಿದರು.

ಇನ್ನು ಗೋಕಾಕ್ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಅಶೋಕ್ ಪೂಜಾರಿ ಪತ್ನಿ ಶಕುಂತಲಾ ಜತೆ ಆಗಮಿಸಿ ಗೋಕಾಕ್ ನ ಸರ್ಕಾರಿ ಕಾಲೇಜಿನಲ್ಲಿ ಮತದಾನ ಮಾಡಿದರು. ಹಾಗೆಯೇ ಹಿರೇಕೆರೂರು ಕ್ಷೇತ್ರದ ಚಿಕ್ಕೊಣತಿಯಲ್ಲಿ ಮಾಜಿ ಶಾಸಕ ಯುಬಿ ಬಣಕಾರ್ ಮತ ಚಲಾಯಿಸಿದರು.

Key words: By-election- DCM- Laxman Sawadi- R Shankar -voting