Sunday, August 2, 2026

BDA Apartments

Home Front Page ಉಪಚುನಾವಣೆ:  3 ಗಂಟೆ ವೇಳೆಗೆ ಶೇ. 46.62 ರಷ್ಟು ಮತದಾನ: ಈ ಕ್ಷೇತ್ರಗಳಲ್ಲಿ ಅತಿ ಹೆಚ್ಚು...

ಉಪಚುನಾವಣೆ:  3 ಗಂಟೆ ವೇಳೆಗೆ ಶೇ. 46.62 ರಷ್ಟು ಮತದಾನ: ಈ ಕ್ಷೇತ್ರಗಳಲ್ಲಿ ಅತಿ ಹೆಚ್ಚು ಮತ್ತು ಅತಿ ಕಡಿಮೆ ಮತದಾನ..

ಬೆಂಗಳೂರು,ಡಿ,5,2019(www.justkannada.in): ರಾಜ್ಯದ 15 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಮತದಾನ  ಮುಕ್ತಾಯಕ್ಕೆ ಕೆಲ ಸಮಯ ಬಾಕಿ ಇದ್ದು ಸದ್ಯದ ಮಾಹಿತಿ ಪ್ರಕಾರ 3 ಗಂಟೆ ವೇಳೆಗೆ ಶೇ.46.62 ರಷ್ಟು ಮತದಾನವಾಗಿದೆ.

ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಶೇ.60.43 ರಷ್ಟು ಮತದಾನವಾಗಿದ್ದು ಅತಿ ಹೆಚ್ಚು ವೋಟಿಂಗ್ ನಡೆದಿದೆ. ಇನ್ನು ಬೆಂಗಳೂರಿನ ಕೆ.ಆರ್ ಪುರಂ ನಲ್ಲಿ ಅತಿ ಕಡಿಮೆ ಮತದಾನವಾಗಿದೆ. ಕೇವಲ ಶೇ.29.25 ರಷ್ಟು ಮಾತ್ರ ಮತದಾನವಾಗಿದ್ದು ಮತದಾರರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

 ಕ್ಷೇತ್ರವಾರು ಮತದಾನ ಪ್ರಮಾಣದ ಪಟ್ಟಿ ಇಲ್ಲಿದೆ ನೋಡಿ….

 ಕೆ.ಆರ್. ಪೇಟೆ- ಶೇ.59.86

ಹುಣಸೂರು ಕ್ಷೇತ್ರ-ಶೇ. 57.44

ಹೊಸಕೋಟೆ ಕ್ಷೇತ್ರ-ಶೇ.54.12

ಮಹಾಲಕ್ಷ್ಮೀ ಲೇಔಟ್-ಶೇ. 30.73

ರಾಣೆಬೆನ್ನೂರು-ಶೇ. 53

ಯಲ್ಲಾಪುರ-ಶೇ. 56.25

ಗೋಕಾಕ್- 53.03

ಯಶವಂತಪುರ-ಶೇ.38.83

ವಿಜಯನಗರ -ಶೇ. 47.37

ಹಿರೇಕೆರೂರು-ಶೇ. 56.06

ಕಾಗವಾಡ -ಶೇ.51.41

ಚಿಕ್ಕಬಳ್ಳಾಪುರ -ಶೇ. 60.43

ಅಥಣಿ- ಶೇ.56.05

ಶಿವಾಜಿನಗರ -ಶೇ.32.72

ಕೆ.ಆರ್ ಪುರಂ-ಶೇ.29.25

 

Key words: By-election – 15 assembly constituencies-voting-percentage