ಕಟ್ಟಡ ಕಾಮಗಾರಿ ವೇಳೆ ದುರಂತ: ಕೂಲಿ ಕಾರ್ಮಿಕ ಸಾವು…

ಮೈಸೂರು,ಏಪ್ರಿಲ್,3,2021(www.justkannada.in):  ಕಟ್ಟಡ ಕಾಮಗಾರಿ ವೇಳೆ ರಾಟೆ ಮುರಿದು ಬಿದ್ದು ಕೂಲಿ ಕಾರ್ಮಿಕ ಸಾವನ್ನಪ್ಪಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.Illegally,Sand,carrying,Truck,Seized,arrest,driver

ಮೈಸೂರಿನ ಇರ್ವಿನ್ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಮಹಮದ್ ಯಾಸಿನ್(21) ಮೃತಪಟ್ಟ ಕೂಲಿ ಕಾರ್ಮಿಕ. ಮಹಮದ್ ಯಾಸಿನ್ ನೆಹರು ನಗರದ ನಿವಾಸಿ. ವಸತಿಗೃಹವೊಂದರ ಕಟ್ಟಡ ಕಾಮಗಾರಿ ವೇಳೆ ಈ ಘಟನೆ ನಡೆದಿದೆ.building- works-death – labor-mysore

ಸಿಮೆಂಟ್ ಮಿಕ್ಸ್ ಇರುವ ಬಕೆಟ್ ಗಳನ್ನ ಮಹಮದ್ ಯಾಸಿನ್ ಮೇಲಂತಸ್ತಿಗೆ ಸಾಗಿಸುತ್ತಿದ್ದು, ಈ ವೇಳೆ ರಾಟೆ ಮುರಿದು ಯಾಸಿನ್ ತಲೆ ಮೇಲೆ ಬಿದ್ದಿದೆ. ಪರಿಣಾಮ ಮಹಮದ್ ಯಾಸಿನ್ ಸಾವನ್ನಪ್ಪಿದ್ದು, ಮಂಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ವಸತಿಗೃಹದಲ್ಲಿ ಈ ದುರ್ಘಟನೆ ನಡೆದಿದೆ. ಈ ಕುರಿತು ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: building- works-death – labor-mysore