ಕೃಷಿಗೆ ಪೂರಕ, ರೈತರ ಅಭಿವೃದ್ದಿಗೆ ಸಮಗ್ರ ಬಜೆಟ್-  ಸಂತಸ ವ್ಯಕ್ತಪಡಿಸಿದ ಕೃಷಿ ಸಚಿವ ಬಿ.ಸಿ.ಪಾಟೀಲ್ …

ಬೆಂಗಳೂರು,ಮಾ. 5,2020(www.justkannada.in):  ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮಂಡಿಸಿರುವ ಬಜೆಟ್ ಕೃಷಿಗೆ ಪೂರಕವಾಗಿದ್ದು ಇದು ರೈತರ ಅಭಿವೃದ್ಧಿಗೆ ಮಂಡಿಸಿದ ಸಮಗ್ರ ಬಜೆಟ್ ಆಗಿದೆ ಎಂದು ಕೃಷಿ ಸಚಿವರಾದ ಬಿ‌.ಸಿ.ಪಾಟೀಲ್ ಹರ್ಷ ವ್ಯಕ್ತಪಡಿಸಿದ್ದಾರೆ.

ಆಯವ್ಯಯ ಮಂಡನೆ ಬಳಿಕ ಮಾಧ್ಯಮದ ಜತೆ ಮಾತನಾಡಿದ ಸಚಿವ ಬಿ.ಸಿ ಪಾಟೀಲ್,  ರಾಜ್ಯದ ರೈತರು ಎಂದು ಹೆಮ್ಮೆಯಿಂದ ಹೇಳಿಕೊಳ್ಳಲು ಭಾವಚಿತ್ರಯುಕ್ತ ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಜಾರಿಗೆ ತರಲಾಗಿದೆ‌. ಹನಿ ನೀರಾವರಿಗೆ ಆದ್ಯತೆ ನೀಡಿದ್ದಾರೆ. ಫಸಲ್ ಭೀಮಾ ಯೋಜನೆಗೆ 900ಕೋಟಿ ಹಣ ಮೀಸಲಿಟ್ಟಿದ್ದಾರೆ‌.ಫಸಲ್ ಭೀಮಾ ಯೋಜನೆಯ ರಾಜ್ಯದ ವಿಮಾ ಕಂತಿನ ಪಾಲು 900ಕೋಟಿ ರೂ.ಬಿಡುಗಡೆಯಾಗಿದೆ .ರೈತರ ಮನೆಬಾಗಿಲಿನಲ್ಲಿಯೇ  ಮಣ್ಣು,ನೀರು ಪರೀಕ್ಷೆ ಮತ್ತು ಇತರೆ ತಾಂತ್ರಿಕ ನೆರವಿಗಾಗಿ ಸಂಚಾರಿ ಕೃಷಿ ಹೆಲ್ತ್ ಕ್ಲಿನಿಕ್ ಆರಂಭಿಸಲಾಗುವುದು ಎಂದರು.

ಸಾವಯವ ಕೃಷಿಯನ್ನು ಪ್ರೋತ್ಸಾಹಕ್ಕಾಗಿ 200 ಕೋಟಿ ರೂ.ಗಳನ್ನು ಒದಗಿಸಲಾಗುವುದು. ಒಟ್ಟಾರೆಯಾಗಿ ರೈತರ ಆದಾಯ ದ್ವಿಗುಣಗೊಳಿಸಲು ಅನ್ನದಾತರ ಬದುಕನ್ನು ಹಸನುಮಾಡಲು ಇಲಾಖೆ ಹಾಗೂ ಸರ್ಕಾರ ಬದ್ಧವಾಗಿದೆ .ಇನ್ನಷ್ಟು ಹೊಸಹೊಸ ಯೋಜನೆಗಳನ್ನು ಹಾಗೂ ರೈತರಿಗಾಗಿ ಪ್ರಾತ್ಯಕ್ಷಿಕೆಗಳನ್ನು ಸಹ ಮಾಡಲಾಗುವುದು  ಎಂದು ಸಚಿವ ಬಿ.ಸಿ ಪಾಟೀಲ್ ತಿಳಿಸಿದ್ದಾರೆ.

Key words: budgets – agriculture -farmers’ development-  Minister- BC Patel