ನವದೆಹಲಿ,ಫೆಬ್ರವರಿ,11,2026 (www.justkannada.in): ಬಜೆಟ್ ನಲ್ಲಿ ವಿಶೇಷವೇನೂ ಇಲ್ಲ. ಬಜೆಟ್ ನಲ್ಲಿ ಹೊಸ ಯೋಜನೆಗಳ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಟೀಕಿಸಿದರು.
ಲೋಕಸಭೆಯಲ್ಲಿ ಇಂದು ಮಾತನಾಡಿದ ರಾಹುಲ್ ಗಾಂಧಿ, ಕಲಾಪದ ವಿಚಾರದಲ್ಲಿ ವಿಪಕ್ಷಗಳ ವಿರುದ್ದ ಸುಳ್ಳು ಆರೋಪ ಮಾಡಲಾಗಿದೆ. ಬಜೆಟ್ ನಲ್ಲಿ ಹೊಸ ಯೋಜನೆ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಬಜೆಟ್ ನಲ್ಲಿ ವಿಶೇಷವೇನೂ ಇಲ್ಲ. ಬಜೆಟ್ ನಲ್ಲಿ ಹೊಸ ಯೋಜನೆ ಬಗ್ಗೆ ಯಾವುದೇ ಮಾಹಿತಿ ಇಲ್ಲ ಇಂಧನ ಹಣಕಾಸು ಸುಧಾರಣೆ ವಿಚಾರದ ಬಗ್ಗೆ ಯಾವುದೇ ಪ್ರಸ್ತಾಪವಿಲ್ಲ ಎಂದರು.
ಅಮೇರಿಕಾ- ಭಾರತ ಒಪ್ಪಂದದ ಬಗ್ಗೆಯೂ ಪ್ರಸ್ತಾಪಿಸಿದ ರಾಹುಲ್ ಗಾಂಧಿ, ಅಮೇರಿಕಾ ಭಾರತದ ನಡುವೆ ವ್ಯಾಪಾರ ಡೀಲ್ ಆಗಿದೆ. ಇಂಧನ ಖರೀದಿ ವಿಚಾರದಲ್ಲಿ ಟ್ರಂಪ್ ಹೇಳಿಕೆ ಬಗ್ಗೆ ಸ್ಪಷ್ಟನೆ ಕೊಡಬೇಕು. ಅಮೇರಿಕ ಜೊತೆಗಿನ ಒಪ್ಪಂದದಿಂದ ರೈತರನ್ನು ಬೆಳೆಗಳಿಗೆ ಧಕ್ಕೆಯಾಗುತ್ತಿದೆ. ಒಪ್ಪಂದದ ಮೂಲಕ ಕೇಂದ್ರ ಸರ್ಕಾರ ರೈತರನ್ನು ಬಲಿಕೊಡುವ ಕೆಲಸ ಮಾಡಬಾರದು ಎಂದರು.
Key words: nothing special, budget, Rahul Gandhi







