Sunday, August 23, 2026

BDA Apartments

Home Front Page ರಾಜ್ಯದಲ್ಲಿ ಕನ್ನಡಿಗರಿಂದ ಆಡಳಿತ ನಡೆಯಬೇಕೇ ಹೊರತು, ದೆಹಲಿ ಬಿಜೆಪಿ ಹೈಕಮಾಂಡ್ನಿಂದ ಅಲ್ಲ ಎಂದ ಎಚ್ಡಿಕೆ

ರಾಜ್ಯದಲ್ಲಿ ಕನ್ನಡಿಗರಿಂದ ಆಡಳಿತ ನಡೆಯಬೇಕೇ ಹೊರತು, ದೆಹಲಿ ಬಿಜೆಪಿ ಹೈಕಮಾಂಡ್ನಿಂದ ಅಲ್ಲ ಎಂದ ಎಚ್ಡಿಕೆ

ಬೆಂಗಳೂರು, ಜುಲೈ 18, 2021 (www.justkannada.in): ರಾಜ್ಯದಲ್ಲಿ ಕನ್ನಡಿಗರಿಂದ ಆಡಳಿತ ನಡೆಯಬೇಕೇ ಹೊರತು, ದೆಹಲಿ ಬಿಜೆಪಿ ಹೈಕಮಾಂಡ್​​ನಿಂದ ಅಲ್ಲ ಎಂದು ಮಾಜಿ ಸಿಎಂ ಎಚ್ಡಿಕೆ ಹೇಳಿದ್ದಾರೆ.

ಸಿಎಂ ಯಡಿಯೂರಪ್ಪ ವಿಶೇಷ ವಿಮಾನದಲ್ಲಿ ಆರು ಬ್ಯಾಗ್ ಗಳಲ್ಲಿ ದೆಹಲಿಗೆ ಏನು ಕೊಂಡೊಯ್ದರು ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ. ಸಿಎಂ ನಿನ್ನೆ ದೆಹಲಿಗೆ ಹೋಗುವಾಗ ಹೈ ಕಮಾಂಡ್​​ಗೆ ಕೊಡೋಕೆ ಆರು ಬ್ಯಾಗ್ ಗಳನ್ನು ಜೊತೆಯಲ್ಲಿ ತೆಗೆದು ಕೊಂಡು ಹೋಗಿದ್ದಾರೆ . ಉಡುಗೊರೆ ಕೊಂಡು ಹೋಗಿದ್ದಾರಾ ಅಥವಾ ಬೇರೆ ಏನು ತಗೊಂಡು ಹೋಗಿದ್ದಾರೆ ಎಂಬುದನ್ನು ಅವರೇ ಹೇಳಬೇಕು ಎಂದು ಎಚ್​ಡಿಕೆ ಕೇಳಿದ್ದಾರೆ.

ರಾಜ್ಯದಲ್ಲಿ ಕನ್ನಡಿಗರಿಂದ ಆಡಳಿತ ನಡೆಯಬೇಕೇ ಹೊರತು, ದೆಹಲಿ ಬಿಜೆಪಿ ಹೈಕಮಾಂಡ್​​ನಿಂದ ಅಲ್ಲ. ನಿನ್ನೆ ಸಿಎಂ ಯಡಿಯೂರಪ್ಪ ದೆಹಲಿಗೆ ಹೋಗಿದ್ದಾರೆ. ಸ್ಪೆಷಲ್ ಫ್ಲೈಟ್ ನಲ್ಲಿ ಹೋಗುವಾಗ ಆರು ಬ್ಯಾಗ್ ಗಳನ್ನು ತಗೊಂಡು ಹೋಗಿದ್ದಾರೆ ಎಂದಿದ್ದಾರೆ.