Thursday, July 30, 2026

BDA Apartments

Home Front Page ಬಿಎಸ್ ವೈ ಅನುಭವ ನಮಗೆ ದಾರಿದೀಪ, ಅವರ ಜೀವನ ಮತ್ತು ಹೋರಾಟ ನಮಗೆ ಸ್ಪೂರ್ತಿ- ಸಿಎಂ...

ಬಿಎಸ್ ವೈ ಅನುಭವ ನಮಗೆ ದಾರಿದೀಪ, ಅವರ ಜೀವನ ಮತ್ತು ಹೋರಾಟ ನಮಗೆ ಸ್ಪೂರ್ತಿ- ಸಿಎಂ ಬೊಮ್ಮಾಯಿ.

ಬೆಂಗಳೂರು,ಫೆಬ್ರವರಿ,24,2023(www.justkannada.in):  ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ಜೀವನ ಮತ್ತು ಹೋರಾಟ ನಮಗೆ ಸ್ಪೂರ್ತಿ ಎಂದು ಸಿಎಂ ಬಸವರಾಜ ಬೊಮ್ಮಾಯಿ ನುಡಿದರು.

ಮಾಜಿ ಸಿಎಂ ಬಿಎಸ್ ಯಡಿಯೂರಪ್ಪಗೆ ಇದು ಕೊನೆಯ ಅಧಿವೇಶನವಾಗಿದ್ದು ಈ ಹಿನ್ನೆಲೆ ಇಂದು ಬಿಎಸ್ ವೈ ವಿದಾಯದ ಭಾಷಣ ಮಾಡಿದರು. ಇದೇ ನನ್ನ ಕೊನೆಯ ಅಧಿವೇಶನ. ಮುಂದೇ ಚುನಾವಣೆಗೆ ನಿಲ್ಲುವ ಪ್ರಶ್ನೆಯೇ ಇಲ್ಲ. ಎಲ್ಲರಿಗೂ ಧನ್ಯವಾದ ಅರ್ಪಿಸುವುದಾಗಿ ಹೇಳಿದರು.

ಬಳಿಕ ಬಿಎಸ್ ವೈ ಕುರಿತು ಸದನದಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಬಿಎಸ್ ವೈಗೆ ನಮ್ಮ ವಯಸ್ಸಿನಷ್ಟು ಅನುಭವವಾಗಿದೆ. ಈ ಸದನಕ್ಕೆ ಬಿಎಸ್ ವೈ ಕೊಡುಗೆ ಅಪಾರ. ಬಡವರಿಗಾಗಿ ಹಲವು ಕಾರ್ಯಕ್ರಮಗಳನ್ನ ಜಾರಿ ಮಾಡಿದರು.   ಅನ್ನದಾತರಿಗಾಗಿ ರೈತ ಬಜೆಟ್, ಭಾಗ್ಯಲಕ್ಷ್ಮಿ ಯೋಜನೆ ಸೇರಿ ಹಲವು ಯೋಜನೆಗಳನ್ನ ಜಾರಿ ಮಾಡಿದರು. ಅವರ ಜೀವನ, ಹೋರಾಟ ನಮಗೆ ಸ್ಪೂರ್ತಿ,  ಬಿಎಸ್ ವೈ ಅನುಭವ ನಮಗೆ ದಾರಿದೀಪವಾಗಿದೆ ಎಂದರು.

Key words: BSY -experience – his life – inspiration-  CM- Basavaraj Bommai