Thursday, September 24, 2026

BDA Apartments

ಜೆಡಿಎಸ್ ಪಕ್ಷದಿಂದ ಸಿಎಂ ಇಬ್ರಾಹಿಂ ಅಧಿಕೃತ ಉಚ್ಚಾಟನೆ BDA JK_Adv BDA Adv
Home Front Page BSNL ಮೈಸೂರು ವಲಯದಿಂದ ಉಚಿತ ಹೈ-ಸ್ಪೀಡ್ ಇಂಟರ್ನೆಟ್ ಮತ್ತು ಸ್ವಯಂ ಉದ್ಯೋಗ ಅಭಿಯಾನ

BSNL ಮೈಸೂರು ವಲಯದಿಂದ ಉಚಿತ ಹೈ-ಸ್ಪೀಡ್ ಇಂಟರ್ನೆಟ್ ಮತ್ತು ಸ್ವಯಂ ಉದ್ಯೋಗ ಅಭಿಯಾನ

​ಮೈಸೂರು,ಜೂನ್,24,2026 (www.justkannada.in): ಗ್ರಾಮೀಣ ಭಾಗದ ಸಬಲೀಕರಣಕ್ಕಾಗಿ ಭಾರತ ಸರ್ಕಾರದ ದೂರಸಂಪರ್ಕ ಇಲಾಖೆಯ ‘ಡಿಜಿಟಲ್ ಭಾರತ್ ನಿಧಿ’ (DBN) ಯೋಜನೆಯಡಿ, ಬಿಎಸ್‌ಎನ್‌ಎಲ್ ಮೈಸೂರು ವಲಯವು ಹಳ್ಳಿಗಳಲ್ಲಿ ಉಚಿತ ಎಫ್‌ಟಿಟಿಎಚ್ (Free FTTH/Fiber) ಇಂಟರ್ನೆಟ್ ಅಳವಡಿಕೆ ಹಾಗೂ ಗ್ರಾಮೀಣ ಸ್ವಯಂ ಉದ್ಯೋಗ ಅಭಿಯಾನವನ್ನು ಹಮ್ಮಿಕೊಂಡಿದೆ.

​ಈ ಯೋಜನೆಯ ಪ್ರಮುಖಾಂಶಗಳು ಹೀಗಿದೆ..

​ಉಚಿತ ಅಳವಡಿಕೆ: ಭಾರತನೆಟ್ ಯೋಜನೆಯಡಿ ವೈಫೈ ರೌಟರ್ (CPE/ONT) ಮತ್ತು ಆಪ್ಟಿಕಲ್ ಫೈಬರ್ ಕೇಬಲ್ ಅನ್ನು ಸಂಪೂರ್ಣ ಉಚಿತವಾಗಿ ನೀಡಲಾಗುವುದು. ಯಾವುದೇ ಇನ್‌ ಸ್ಟಾಲೇಷನ್ ಶುಲ್ಕ ಇರುವುದಿಲ್ಲ. ಗ್ರಾಹಕರು ಕೇವಲ ಮಾಸಿಕ ಚಂದಾದಾರಿಕೆ ಪಾವತಿಸಬೇಕಿರುತ್ತದೆ.

​ವಿಶೇಷ ಆಕರ್ಷಕ ಪ್ಲಾನ್: ಗ್ರಾಮೀಣ ಗ್ರಾಹಕರಿಗಾಗಿ ಕೇವಲ ರೂ. 259/- ರ ಮಾಸಿಕ ಪ್ಲಾನ್ ಪರಿಚಯಿಸಲಾಗಿದ್ದು, ಇದರಲ್ಲಿ 25 Mbps ವೇಗದ 700 GB ಡೇಟಾ, ಅನಿಯಮಿತ ಕರೆಗಳು ಹಾಗೂ ಪ್ರಸಾರ ಭಾರತಿ ಟಿವಿ/Waves App/BSNL-Skypro IFTV ಉಚಿತ ಚಾನೆಲ್‌ ಗಳ ಸೌಲಭ್ಯವಿದೆ.

​ಸ್ವಯಂ ಉದ್ಯೋಗಾವಕಾಶ: ಗ್ರಾಮೀಣ ಯುವಕರು ಬಿಎಸ್‌ಎನ್‌ಎಲ್ ನೊಂದಿಗೆ ಕೈಜೋಡಿಸಿ ‘ಭಾರತ್‌ನೆಟ್ ಉದ್ಯಮಿ’ (BNU) ಆಗಿ ನೋಂದಾಯಿಸಿಕೊಳ್ಳಬಹುದು ಮತ್ತು ಹಳ್ಳಿಗಳಿಗೆ ಇಂಟರ್ನೆಟ್ ಸೇವೆ ಒದಗಿಸುವ ಮೂಲಕ ಆದಾಯ ಗಳಿಸಬಹುದಾಗಿದೆ.BSNL ಮೈಸೂರು ವಲಯದಿಂದ ಉಚಿತ ಹೈ inter

​ಈ ಉಚಿತ ಇಂಟರ್ನೆಟ್ ಸಂಪರ್ಕ ಪಡೆಯಲು ಅಥವಾ ಉದ್ಯಮಿಯಾಗಿ ನೋಂದಾಯಿಸಿಕೊಳ್ಳಲು ಸಾರ್ವಜನಿಕರು ಹತ್ತಿರದ ಬಿಎಸ್‌ಎನ್‌ಎಲ್ ಗ್ರಾಹಕ ಸೇವಾ ಕೇಂದ್ರವನ್ನು ಸಂಪರ್ಕಿಸಬಹುದು ಎಂದು ಬಿಎಸ್‌ಎನ್‌ಎಲ್ ಮೈಸೂರು ವ್ಯವಹಾರ ವಲಯದ ಮಹಾ ಪ್ರಬಂಧಕರಾದ ಶ್ರೀ ರಾಜೇಂದ್ರ ಕುಮಾರ್ ಸಿಂಗ್ ತಿಳಿಸಿದ್ದಾರೆ.ಸ್ಪೀಡ್ ಇಂಟರ್ನೆಟ್ ಮತ್ತು ಸ್ವಯಂ ಉದ್ಯೋಗ ಅಭಿಯಾನ jk02_new jk02 new

​ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:

​ಸಹಾಯಕ ಮಹಾ ಪ್ರಬಂಧಕರು (ಮಾರ್ಕೆಟಿಂಗ್), ಬಿಎಸ್‌ಎನ್‌ಎಲ್, ಮೈಸೂರು.

​ದೂರವಾಣಿ: 0821-2364545

​ಮೊಬೈಲ್: 9449031004

​ಇಮೇಲ್: agmcfamys@gmail.com

Key words: Free, high-speed, internet, self-employment, campaign, BSNL Mysore zone