ಬಿಎಸ್ ವೈರನ್ನ ಟಾರ್ಗೆಟ್ ಮಾಡಿದ್ರೆ ನಾವೇ ಸುಟ್ಟು ಹೋಗ್ತೀವಿ ಎಂದ ಸಚಿವ ಸಿ.ಪಿ ಯೋಗೇಶ್ವರ್.

ಕೊಪ್ಪಳ,ಜೂನ್,30,2021(www.justkannada.in):  ಸಿಎಂ ಬದಲಾವಣೆಗೆ ತೆರೆಮರೆಯಲ್ಲಿ ಕಸರತ್ತು  ನಡೆಸುತ್ತಿದ್ದ ವಿಚಾರದಲ್ಲಿ  ಸಚಿವ ಸಿ.ಪಿ ಯೋಗೇಶ್ವರ್ ಹೆಸರು ಕೇಳಿಬಂದಿತ್ತು. ಈ ನಡುವೆ ಇದೀಗ ಈ ಬಗ್ಗೆ ಸಚಿವ ಸಿ.ಪಿ ಯೋಗೇಶ್ವರ್ ಅವರೇ ಸ್ಪಷ್ಟನೆ ನೀಡಿದ್ದಾರೆ.jk

ಬಿಎಸ್ ವೈರನ್ನ ಟಾರ್ಗೆಟ್ ಮಾಡಿದ್ರೆ ನಾವೇ ಸುಟ್ಟು ಹೋಗ್ತೀವಿ. ಬಿಎಸ್ ವೈ ಪದಚ್ಯುತಿ ಮಾಡುವ ಕೆಲಸ ಮಾಡ್ತಿಲ್ಲ ಎಂದು ಸಚಿವ ಸಿ.ಪಿ ಯೋಗೇಶ್ವರ್ ತಿಳಿಸಿದ್ದಾರೆ.

ಇಂದು ಕೊಪ್ಪಳ ಜಿಲ್ಲೆ ಗಂಗಾವತಿಯ ಅಂಜನಾದ್ರಿ ಬೆಟ್ಟಕ್ಕೆ ಭೇಟಿ ನೀಡಿ ದೇವರ ದರ್ಶ ಪಡೆದ ಬಳಿಕ ಮಾತನಾಡಿದ ಸಚಿವ ಸಿ.ಪಿ ಯೋಗೇಶ್ವರ್, ನಮ್ಮ ಆಂತರಿಕ ಸಮಸ್ಯೆ ಹೇಳಿಕೊಳ್ಳಲು ದೆಹಲಿಗೆ ಹೋಗ್ತಿದ್ದವು. ಸುಮ್ಮನೆ ಯಡಿಯೂರಪ್ಪ ಬಳಿ ನಮ್ಮನ್ನ ಟಾರ್ಗೆಟ್ ಮಾಡಬೇಡಿ. ಬಿಎಸ್ ವೈ ಅವರೇ ನಮ್ಮ ಮುಖ್ಯಮಂತ್ರಿ ಎಂದರು.

ಪರೀಕ್ಷೆ ಬರೆದು ಉತ್ತರಕ್ಕಾಗಿ ನಾನು ಅಂಜನಾದ್ರಿಗೆ ಬಂದಿಲ್ಲ. ಪರೀಕ್ಷೆ ಫಲಿತಾಂಶ ಯಾವಾಗ ಬರುತ್ತೆ ಗೊತ್ತಿಲ್ಲ. ದೊಡ್ಡವರ ತೀರ್ಮಾ ಎಂದರು.

Key words:   BS yeddyurapppa- Target –burned- ourselves-minister –cp yogeshwar