ಬಿಎಸ್ ವೈ ಒಬ್ಬ ಚಿಕ್ಕ ನರೇಂದ್ರ ಮೋದಿ: ಬರೀ ಸುಳ್ಳನ್ನೇ ಹೇಳ್ತಾರೆ- ಮಾಜಿ ಸಿಎಂ ಸಿದ್ಧರಾಮಯ್ಯ ಟೀಕೆ

ಬೆಂಗಳೂರು,ನವೆಂಬರ್,28,2020(www.justkannada.in):  ಬಿಎಸ್ ವೈ ಒಬ್ಬ ಚಿಕ್ಕ ನರೇಂದ್ರ ಮೋದಿ.  ಬರೀ ಸುಳ್ಳನ್ನೇ ಹೇಳ್ತಾರೆ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಟೀಕಿಸಿದರು.I didn't knew CM BSY will think so cheaply - KPCC President D.K. Shivakumar

ದೊಡ್ಡಬಳ್ಳಾಪುರದಲ್ಲಿ ಇಂದು ಮಾತನಾಡಿದ ವಿಪಕ್ಷ ನಾಯಕ ಸಿದ್ಧರಾಮಯ್ಯ, ಕೊವಿಡ್​ನಲ್ಲಿ 2.5 ಸಾವಿರ ಕೋಟಿ ಭ್ರಷ್ಟಾಚಾರ ಮಾಡಿದ್ದಾರೆ. ಯಡಿಯೂರಪ್ಪ ಈ ಹಿಂದೆ ಚೆಕ್ ಮತ್ತು ಕ್ಯಾಷ್ ಮೂಲಕ ಲಂಚ ಪಡೆಯುತ್ತಿದ್ದರು. ಈಗ, ಅವರ ಮಗ ಅಡ್ವಾನ್ಸ್ ಆಗಿದ್ದಾರೆ. RTGS ಮೂಲಕ ಲಂಚ ಪಡೆಯುತ್ತಿದ್ದಾರೆ ಎಂದು ಕಿಡಿಕಾರಿದರು.bs-yeddyurappa-small-narendra-modi-former-cm-siddaramaiah-criticizes

ಈಡಿಗ ಸೇರಿ ಹಲವು ಹಿಂದುಳಿದ ಸಮುದಾಯ ಇವೆ. ಅವುಗಳಿಗೆ ಮಂಡಳಿ ರಚಿಸಬೇಕಿತ್ತು. ವೃದ್ಧಾಪ್ಯ ವೇತನ ನೀಡಲು ಸರ್ಕಾರದ ಬಳಿ ಹಣವಿಲ್ಲ. ಆದರೂ ನಿಗಮ ಮಂಡಳಿ  ಯಾಕೆ ರಚಿಸಿದ್ದಾರೆ. ಜನರ ಆದ್ಯತೆ ಮೇರೆಗೆ ಖರ್ಚು ಮಾಡುವ ವಿವೇಕ ಇರಬೇಕು ಎಂದು ಸಿಎಂ ಬಿಎಸ್ ಯಡಿಯೂರಪ್ಪಗೆ ಸಿದ್ದರಾಮಯ್ಯ ಚಾಟಿ ಬೀಸಿದರು.

Key words: BS Yeddyurappa- small-Narendra Modi-Former CM- Siddaramaiah -criticizes