ಬಿಜೆಪಿಯಲ್ಲಿ ಬಿಎಸ್ ವೈರನ್ನ ಯೂಸ್ ಅಂಡ್ ಥ್ರೋ ರೀತಿ ಬಳಿಕೆ: ಅವರ ಮಗನಿಗೂ 100% ಟಿಕೆಟ್ ಕೊಡಲ್ಲ- ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್.

ಮೈಸೂರು,ಜುಲೈ,26,2022(www.justkannada.in): ಬಿಜೆಪಿ ಯಡಿಯೂರಪ್ಪ ಅವರನ್ನು ಯೂಸ್ ಅಂಡ್ ಥ್ರೋ ತರ ಬಳಸಿಕೊಂಡಿದೆ. ಬಿಜೆಪಿ ಕೃತಜ್ಞತೆ ಇಲ್ಲದ ಸರ್ಕಾರ ಎಂದು ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ವಾಗ್ದಾಳಿ ನಡೆಸಿದರು.

ಮೈಸೂರಿನಲ್ಲಿ ಮಾತನಾಡಿ ಪರೋಕ್ಷವಾಗಿ ಪ್ರಧಾನಿ ಮೋದಿ ಮತ್ತು ಅಮಿತ್ ಶಾರ ಬಗ್ಗೆ ಟೀಕಿಸಿದ ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ , ಮೇಲ್ಮಟ್ಟದಲ್ಲಿರುವ ಆ ಇಬ್ಬರಿದ್ದಾರಲ್ಲ ಅವರು ಮಾರ್ವಾಡಿಗಳು. ಅವರು ವ್ಯಾಪಾರ ದೃಷ್ಟಿಯಿಂದಲೇ ನೋಡ್ತಾರೆ. ಉಪಯೋಗಿಸಿಕೊಂಡ ಮೇಲೆ ಮೂಲೆ ಗುಂಪು ಮಾಡ್ತಾರೆ. ಯಡಿಯೂರಪ್ಪ ನವರು ರಿಮೋಟ್ ಕಂಟ್ರೋಲ್ ಅಷ್ಟೇ. ಅವರ ಮಗನಿಗೂ 100% ಟಿಕೆಟ್ ಕೊಡಲ್ಲ.ವೀರಶೈವರು ಈಗಲಾದ್ರೂ ಅರ್ಥ ಮಾಡಿಕೊಳ್ಳಿ ಎಂದು ಹೇಳಿದರು.

ಬಿಜೆಪಿವರು ನೀಚ ಕೆಲಸಕ್ಕೆ ಮುಂದಾಗಿದ್ದಾರೆ. ಕೊಡಗಿನಲ್ಲಿ ಮುಸ್ಲಿಂ ಯುವಕ ಹೆಸರಿನಲ್ಲಿ  ಫೇಕ್ ಫೇಸ್ಬುಕ್ ಕ್ರಿಯೇಟ್ ಮಾಡಿದ್ದಾರೆ.ಅದರಲ್ಲಿ ಅಸಹ್ಯಕರವಾದ ಸಂದೇಶಗಳನ್ನ ಹರಿಬಿಟ್ಟಿದ್ದಾರೆ. ಫೇಕ್ ಫೇಸ್ಬುಕ್ ಕ್ರಿಯೇಟ್ ಮಾಡಿರೋದು ಬಿಜೆಪಿ ಮುಖಂಡನ ಪುತ್ರ. ಜಿಲ್ಲೆ ಬಿಜೆಪಿ ಉಪಾಧ್ಯಕ್ಷ ಪೊನ್ನಪ್ಪನ ಮಗ ದಿವಿನ್ ಬೂಪಯ್ಯ ಎಂಬುದು ತನಿಖೆಯಿಂದ ಗೊತ್ತಾಗಿದೆ. ಮುಸ್ಲಿಂ ಯುವಕ ಮಹಮದ್ ಅಸ್ಮಾಕ್ ಹೆಸರಿನಲ್ಲಿ ಫೇಕ್ ಫೇಸ್ ಬುಕ್. ಇವರು ಎಂಎಲ್ಸಿ ರವಿ ಕುಶಾಲಪ್ಪ, ಕೆಜಿ ಬೋಪಯ್ಯ ಮತ್ತು ಪ್ರತಾಪ್ ಸಿಂಹ ಅವರ  ಆಪ್ತರಾಗಿದ್ದಾರೆ. ಇವರ ಕುಮ್ಮಕ್ಕಿನಿಂದ ಇಂತಹ ಧರ್ಮ ಧರ್ಮಗಳ ನಡುವೆ ವಿಷ ಬೀಜ ಬಿತ್ತುವ ಕೆಲಸ ಮಾಡುತ್ತಿದ್ದಾರೆ. ಇವರ ಮೇಲೆ ಯಾಕೆ ಕೇಸ್ ದಾಖಲಾಗಿಲ್ಲ..? ಇದರ ಹಿಂದೆ ಇರುವ ಕುಮ್ಮಕ್ಕು ನೀಡುವ  ಪ್ರತಾಪ್ ಸಿಂಹ, ಕೆಜಿ ಬೋಪಯ್ಯ, ಇವರನ್ನು ಬಂಧಿಸಬೇಕು.  ಇವರು ಮುಸ್ಲಿಂ ಸಮುದಾಯವನ್ನೇ ಟಾರ್ಗೆಟ್ ಮಾಡಿ ದ್ವೇಷದ ರಾಜಕೀಯ ಮಾಡ್ತಾ ಇದ್ದಾರೆ ಎಂದು ಎಂ ಲಕ್ಷ್ಮಣ್ ಕಿಡಿಕಾರಿದರು.

ಒಂದು ಕಡೆ ಗೋಹತ್ಯೆ ನಿಷೇಧ ಮಾಡೋರು ಇವರೇ. ಇನ್ನೊಂದು ಕಡೆ ಗೋಮಾಂಸ, ಹಂದಿ ಮಾಂಸ ಮಾರಾಟ ಮಾಡುವವರೂ ಇವರೇ. ಸಂಸದೆ ಸ್ಮೃತಿ ಇರಾನಿ ಮಗಳು ಗೋವಾದಲ್ಲಿ ತೆರೆದಿರುವ ಬಾರ್ ಅಂಡ್ ಅಂಡ್ ರೆಸ್ಟೋರೆಂಟ್ ಹೋಟೆಲ್ ನಲ್ಲಿ ದನ, ಹಂದಿ ಮಾಂಸದ ಮೆನುವಿದೆ. ಅವರ ಅಕ್ರಮ ರೆಸ್ಟೋರೆಂಟ್ ಗೆ ನೋಟೀಸ್ ನೀಡಿದ SP  ಮತ್ತು DC ಅವರನ್ನೇ ಸಸ್ಪೆಂಡ್ ಮಾಡ್ತಾರೆ. ಇದು ಬಿಜೆಪಿಯವರ ಸಾಧನೆ ಎಂದು ವಾಗ್ದಾಳಿ ನಡೆಸಿದರು.

ಮೈಸೂರು ವಿಮಾನ ನಿಲ್ದಾಣಕ್ಕೆ ನಾಲ್ವಡಿಯವರ ಹೆಸರಿಡುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಎಂ.ಲಕ್ಷ್ಮಣ್, ಪ್ರತಾಪ್ ಸಿಂಹ ಸುಳ್ಳು ಹೇಳುವುದನ್ನ ಬಿಡಬೇಕು. ನಾವು ಹಿಟ್ ಅಂಡ್ ರನ್ ಕೇಸ್ ಮಾಡಲ್ಲ. ಕಾಂಗ್ರೆಸ್ ಸರ್ಕಾರ 2015 ಮಾರ್ಚ್ 17 ರಂದೇ ಶಿಫಾರಸ್ಸು ಮಾಡಿತ್ತು. ಈಗ ನಾನು ಮಾಡಿದ್ದು ಅಂಥಾ ಪ್ರತಾಪ್ ಸಿಂಹ ಕೊಚ್ಚಕೊಳ್ತಾರೆ. ನಾನು ಪ್ರೆಸ್ ಮೀಟ್ ಮಾಡಿದ್ರೆ ನನ್ನ ಮೇಲೆ ಮಾನನಷ್ಟ ಮೊಕದ್ದಮೆ ದೂರು ಕೊಡ್ತಿರಾ. ನಿಮಗೆ ಮಾನ ಇದ್ರೆ ತಾನೇ ಮಾನನಷ್ಟ ಆಗೋದು. ನಿಮ್ಮ ಸುಳ್ಳುಗಳನ್ನ ಪ್ರತಿದಿನ ಎಕ್ಸ್ಪೋಸ್ ಮಾಡುತ್ತೇವೆ ಎಂದು ಹರಿಹಾಯ್ದರು.

Key words: BS Yeddyurappa-BJP-use – throw-  KPCC spokesperson- M. Laxman.

ENGLISH SUMMARY..

BJP is using BSY as use and throw: They won’t give the ticket to his son 100% – KPCC Spokesperson M. Lakshmana
Mysuru, July 26, 2022 (www.justkannada.in): “The BJP has used former Chief Minister and senior leader B.S. Yediyurappa as use and throw. It is a party which doesn’t have any gratitude,” observed KPCC Spokesperson M. Lakshmana.
Speaking in Mysuru today, he criticized Prime Minister Narendra Modi and BJP leader Amit Shah. “Those two leaders who are on the top are Marwaris. They look at everything through a business eye. They will corner anyone after using them. Yediryuappra is just a remote control. They won’t give the ticket to his son also 100%. Veerashaivas should understand at least now,” he said.
“The BJP has lost its morality completely. They have created a fake Facebook account in the name of Muslim youth in Kodagu and have posted improper messages on it. The son of a BJP leader has created the Facebook account. Through investigation, it has been found that Divin Bopaiah, son of District BJP Vice-President Ponnappa is the one who has created the fake FB identity. The fake ID is being created in the name of Mohammed Asmak. He is a close aide of MLC Ravi Kushalappa, K.G. Bopaiah and Pratap Simha. With their support, he is doing such things as flare up communal clashes. Why a case has not been registered against him? I demand to arrest Pratap Simha and K.G. Bopaiah who are behind this. They are targeting the Muslim community and doing hatred politics,” he alleged.
Keywords: KPCC Spokesperson M. Lakshmana/ BJP/ Yediyurappa