Friday, September 11, 2026

BDA Apartments

Home Crime ಮನೆಯಿಂದ ಹೊರ ಹಾಕಿದ ಅಣ್ಣ: ಬೇಸತ್ತ ತಮ್ಮ ನೇಣಿಗೆ ಶರಣು

ಮನೆಯಿಂದ ಹೊರ ಹಾಕಿದ ಅಣ್ಣ: ಬೇಸತ್ತ ತಮ್ಮ ನೇಣಿಗೆ ಶರಣು

ಮೈಸೂರು,ಅಕ್ಟೋಬರ್,26,2024 (www.justkannada.in):  ಕ್ಷುಲ್ಲಕ ಕಾರಣ ಅಣ್ಣ ತಮ್ಮನ ನಡುವೆ ಗಲಾಟೆ ನಡೆದು ಅಣ್ಣ ಮನೆಯಿಂದ ಹೊರ ಹಾಕಿದ್ದಕ್ಕೆ ಬೇಸತ್ತ ತಮ್ಮ ನೇಣಿಗೆ ಶರಣಾಗಿರುವ ಘಟನೆ ಮೈಸೂರು  ಜಿಲ್ಲೆ ನಂಜನಗೂಡು ತಾಲ್ಲೂಕಿನ ಅಹಲ್ಯ ಗ್ರಾಮದಲ್ಲಿ ನಡೆದಿದೆ.

ಸಿದ್ದರಾಜು(32) ಮೃತಪಟ್ಟ ಸಹೋದರ. ವಿದ್ಯುತ್ ಬಿಲ್ ಪಾವತಿಸಿ ಬಂದಿದ್ದ ಮೃತ ಸಿದ್ದರಾಜು ಅಣ್ಣನ ಬಳಿ ವಿದ್ಯುತ್ ಬಿಲ್ ಕಟ್ಟಿದ್ದ 200 ರೂ ಕೇಳಿದ್ದಾನೆ. ಈ ವೇಳೆ ಪರಸ್ಪರ ಜಗಳವಾಗಿದ್ದು, ತಮ್ಮ ಸಿದ್ಧರಾಜು ಮೇಲೆ ಅಣ್ಣ ಹಲ್ಲೇ ಮಾಡಿ ಮನೆಯಿಂದ ಹೊರ ದಬ್ಬಿದ್ದಾನೆ.

ಹೊರ ಬಂದ ತಮ್ಮ ಗ್ರಾಮದ ಹೊರ ವಲಯದಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಶರಣಾಗಿದ್ದು, ಜಯಪುರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.  ಸ್ಥಳಕ್ಕೆ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Key words: Brother, thrown out, house, hanging, mysore