BREAKING NOW : ನಾಳೆ ನಡೆಯುವ CET ಪರೀಕ್ಷೆಗೆ ರಾಜ್ಯ ಹೈಕೋರ್ಟ್ ಹಸಿರು ನಿಶಾನೆ

 

ಬೆಂಗಳೂರು, ಜು.29, 2020 : (www.justkannada.in news) : ನಾಳೆಯಿಂದ ಎರಡು ದಿನಗಳ ಕಾಲ ನಡೆಸಲು ಉದ್ದೇಶಿಸಿದ್ದ ಸಿಇಟಿ ಪರೀಕ್ಷೆಗೆ ರಾಜ್ಯ ಹೈಕೋರ್ಟ್ ಹಸಿರು ನಿಶಾನೆ ತೋರಿಸಿದೆ.

ಪರೀಕ್ಷೆ ರದ್ದತಿಗೆ ಕೋರಿ ಸಲ್ಲಿಸಲಾಗಿದ್ದ ಪಿಐಎಲ್ ವಿಚಾರಣೆ ಇಂದು ಮಧ್ಯಾಹ್ನ ಹೈಕೋರ್ಟ್ ನಲ್ಲಿ ನಡೆಯಿತು. ಅದರ ವಿವರ ಹೀಗಿದೆ….

jk-logo-justkannada-logo

CET Live update… @ 4.30 pm

ರಾಜ್ಯದಲ್ಲಿ ಕೊರೊನಾ ವ್ಯಾಪಿಸುತ್ತಿರುವ ಹಿನ್ನೆಲೆ.
ಸಿಇಟಿ ಪರೀಕ್ಷೆ ಪ್ರಶ್ನಿಸಿದ್ದ ಪಿಐಎಲ್ ವಿಚಾರಣೆ.
ನಿಗದಿಯಂತೆ ಪರೀಕ್ಷೆ ನಡೆಸುವುದಾಗಿ ಸರ್ಕಾರದ ಹೇಳಿಕೆ.ಸರ್ಕಾರದ ನಿರ್ಧಾರ ಹೈಕೋರ್ಟ್ ಗೆ ಸಲ್ಲಿಸಿದ ಎಎಜಿ .
ಕಂಟೈನ್ ಮೆಂಟ್ ಝೋನ್ ನಲ್ಲಿರುವವರಿಗೂ ಪರೀಕ್ಷೆಗೆ ಅವಕಾಶ .ಹಾಲ್ ಟಿಕೆಟ್ ತೋರಿಸಿದರೆ ಝೋನ್ ಹೊರಗೆ ಬರಲು ಅವಕಾಶ . ಹೈಕೋರ್ಟ್ ಗೆ ರಾಜ್ಯ ಸರ್ಕಾರದ ಹೇಳಿಕೆ.
ಸಿಇಟಿ ಪರೀಕ್ಷೆಗೆ ಅರ್ಜಿದಾರರ ಆಕ್ಷೇಪ. ನೀಟ್ ಪರೀಕ್ಷೆ ಮುಂದೂಡಲಾಗಿದೆ. ಸೂಕ್ತ ವಾತಾವರಣ ನಿರ್ಮಾಣವಾಗುವವರೆಗೆ ಮುಂದೂಡಲು ಮನವಿ.
ಅರ್ಜಿದಾರರ ಪರ ಹಿರಿಯ ವಕೀಲ ಎ.ಎಸ್.ಪೊನ್ನಣ್ಣ ಮನವಿ.
ಅನ್ಯರಾಜ್ಯದಿಂದ 1881 ವಿದ್ಯಾರ್ಥಿಗಳು ರಾಜ್ಯಕ್ಕೆ ಬರಲಿದ್ದಾರೆ.ಬಿಸಿನೆಸ್ ಪ್ರಯಾಣಿಕರಂತೆ ಭಾವಿಸಿ ಕ್ವಾರಂಟೈನ್ ನಿಂದ ವಿನಾಯಿತಿ. ವಿದ್ಯಾರ್ಥಿಗಳಿಗೆ ಕ್ವಾರಂಟೈನ್ ನಿಂದ‌ ವಿನಾಯಿತಿ ಎಂದು ಎಎಜಿ ಹೇಳಿಕೆ.
ಮುಂದುವರಿಲಿದೆ…..

bangalore-high-court-CET-exam-PIL

CET Live update 2 @ 5.30 pm

ವಿಚಾರಣೆ 15 ನಿಮಿಷ ಕಾಲ ಮುಂದೂಡಿದ ಹೈಕೋರ್ಟ್.
ನಾಳೆ ನಡೆಯುವ ಸಿಇಟಿ ಪರೀಕ್ಷೆ ಮುಂದೂಡಿದರೆ ಆಗುವ ನಷ್ಟವೇನು. ಮುಂದೂಡಿದರೆ ಸರಿಪಡಿಸಲಾಗದಷ್ಟು ತೊಂದರೆಯಾಗಲಿದೆಯೇ .? ರಾಜ್ಯ ಸರ್ಕಾರಕ್ಕೆ ನ್ಯಾ. ಅರವಿಂದ್ ಕುಮಾರ್ ಪ್ರಶ್ನೆ.
ಸರ್ಕಾರ ಪರೀಕ್ಷೆಗೆ ಎಲ್ಲಾ ಸಿದ್ದತೆ ಪೂರ್ಣಗೊಳಿಸಿದೆ. ಮುಂದೂಡಿದರೆ ಸಿದ್ದರಿರುವ ವಿದ್ಯಾರ್ಥಿಗಳಿಗೆ ತೊಂದರೆ ಆಗಬಹುದು. ಹೈಕೋರ್ಟ್ ಪ್ರಶ್ನೆಗೆ ಎಎಜಿ ಧ್ಯಾನ್ ಚಿನ್ನಪ್ಪ ಉತ್ತರ.

jk-logo-justkannada-logo

CET Live update 3 @ 7.15 pm

ಮತ್ತೆ ವಿಚಾರಣೆ ಆರಂಭ..

ಸರ್ಕಾರಿ ವಕೀಲರಿಗೆ ಹೈಕೋರ್ಟ್ ಪ್ರಶ್ನೆ
ಕೊರೊನಾ ಸೋಂಕಿತ ವಿದ್ಯಾರ್ಥಿಗಳು ವೈದ್ಯಕೀಯ ಪ್ರಮಾಣಪತ್ರ ಕಡ್ಡಾಯವೇ . ಪ್ರಮಾಣಪತ್ರ ನೀಡದಿದ್ದರೆ ಪರೀಕ್ಷೆಗೆ ಅವಕಾಶವಿಲ್ಲವೇ.?

ಕಂಟೈನ್ ಮೆಂಟ್ ಝೋನ್ ಗಳ ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ ಇದೆ . ಹೈಕೋರ್ಟ್ ಪ್ರಶ್ನೆಗೆ ರಾಜ್ಯ ಸರ್ಕಾರದ ಉತ್ತರ.

ಈವರೆಗೆ 51 ವಿದ್ಯಾರ್ಥಿಗಳು ಮಾತ್ರ ಸೋಂಕಿತರು. ಪ್ರಮಾಣಪತ್ರ ನೀಡದಿದ್ದರೂ ಪರೀಕ್ಷೆ ಬರೆಯಲು ಅವಕಾಶ . ಹೈಕೋರ್ಟ್ ಗೆ ಸರ್ಕಾರಿ ವಕೀಲ ವಿಕ್ರಮ್ ಹುಯಿಲ್ಗೋಳ್ ಹೇಳಿಕೆ.

 

 

 

 

JUSTKANNADA. IN

 

KEY WORDS : bangalore-high-court-CET-exam-PIL