ಟ್ರೆಂಡಿಂಗ್‌ ಆಗುತ್ತಿದೆ #BoycottJio ಹ್ಯಾಷ್‌ ಟ್ಯಾಗ್‌..!

BoycottJio Hashtag is trending in social media.

 

ಬೆಂಗಳೂರು, ಜು,06,2014 🙁www.justkannada.in news) ರಿ ಚಾರ್ಜ್‌ ದರ ಹೆಚ್ಚಳ ಮಾಡಿದ ಉದ್ಯಮಿ ಮುಖೇಶ್‌ ಅಂಬಾನಿ ಒಡೆತನದ ಜೀಯೋ ಮೊಬೈಲ್‌ ನೆಟ್‌ ವರ್ಕ್‌ ಸಂಪರ್ಕ ಬಾಯ್‌ ಕಾಟ್‌ ಮಾಡುವ ಅಭಿಯಾನ ಆರಂಭ.

ಸೋಷಿಯಲ್‌ ಮೀಡಿಯಾದ ಸೆನ್ಸೇಷನ್‌ ದೃವರಾಠೆ, ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್.‌ ಇದೀಗ ಈ ಪೋಸ್ಟ್‌ ವೈರಲ್.‌ #BoycottJio ಹ್ಯಾಷ್‌ ಟ್ಯಾಗ್‌ ಟ್ರೆಂಡಿಂಗ್‌ ಆಗುತ್ತಿದೆ.

ಅಂಬಾನಿ ತನ್ನ ಮಗನ ಮದುವೆಯನ್ನು ಅದ್ದೂರಿಯಾಗಿ ಆಚರಿಸಲು ಜನತೆ ಮೇಲೆ ಬರೆ ಎಳೆಯುತ್ತಿದ್ದಾರೆ. ಸಾವರಾರು ಕೋಟಿ ರೂ. ದುಂದು ವೆಚ್ಚ ಮಾಡಿ ಮದುವೆ ಸಂಭ್ರಮದಲ್ಲಿರುವ ಅಂಬಾನಿ, ಅಲ್ಲಿ ಆಗಿರುವ ಖರ್ಚನ್ನು ನಮ್ಮಂತ ಗ್ರಾಹಕರ ಜೇಬಿಗೆ ಕತ್ತರಿ ಹಾಕುವ ಮೂಲಕ ವಸೂಲಿ ಮಾಡುತ್ತಿದ್ದಾರೆ ಎಂದು ಪೋಸ್ಟ್‌ ನಲ್ಲಿ ದೂರಿದ್ದಾರೆ.

ಇತ್ತೀಚೆಗಷ್ಟೆ ಅಂಬಾನಿ ಒಡೆತನದ ಜೀಯೋ ನೆಟ್‌ ವರ್ಕ್‌ ತನ್ನ ನೆಟ್‌ ವರ್ಕ್‌ ದರವನ್ನು ಪರಿಷ್ಕರಿಸಿತ್ತು. ಅದು ಶೇ. ೨೦ ರಷ್ಟು ದರ ಹೆಚ್ಚಳ ಮಾಡಿತ್ತು. ಈ ಬೆಳವಣಿಗೆಯಿಂದ ಜೀಯೋ ಗ್ರಾಹಕರು ಕಂಗಾಲಾಗಿದ್ದರು. ಅನೇಕರು ಜೀಯೋ ಸಹವಾಸವೇ ಬೇಡ ಎಂದು ಕೇಂದ್ರ ಸರಕಾರದ ಒಡೆತನದ ಬಿಎಸ್ಎನ್. ಎಲ್‌ ಗೆ ಪೂರ್ಟ್‌ ಆಗಿದ್ದರು.

KEY WORDS: BoycottJio Hashtag is trending in social media.