ತನಗಿಂತ ಅಕ್ಕನಿಗೆ ಹೆಚ್ಚಿನ ಬೆಲೆಯ ಮೊಬೈಲ್ ಕೊಡಿಸಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡ ಬಾಲಕ !

ಮೈಸೂರು, ಜೂನ್ 22, 2020 (www.justkannada.in): ಮೊಬೈಲ್ ಗೀಳು ಕ್ರಿಮಿನಾಶಕ ಸೇವಿಸಿ ಬಾಲಕ ಆಸ್ಪತ್ರೆಯಲ್ಲಿ ಸಾವನ್ನಪ್ಪುವಂತೆ ಮಾಡಿದೆ.

ತನಗಿಂತ ತನ್ನ ಅಕ್ಕನಿಗೆ ಐದು ನೂರು ಹೆಚ್ಚಿನ ಬೆಲೆ ಮೊಬೈಲ್ ಕೊಡಿಸಿದ್ದಕ್ಕೆ ಕ್ರಿಮಿನಾಶಕ ಸೇವಿಸಿದ ಬಾಲಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕಿಮಿನಾಶಕ ಸೇವಿಸಿ ನಿತ್ರಾಣಗೊಂಡ ಬಾಲಕನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ 3ದಿನದ ನಂತರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.

ಎಚ್.ಡಿ.ಕೋಟೆ ತಾಲೂಕಿನ ಬೆಳಗನಹಳ್ಳಿ ಕಾವಲ್ ಗ್ರಾಮದ ನಿವಾಸಿ ಆದಿತ್ಯ (15) ಮೃತ ಬಾಲಕ. ಈ ಸಂಬಂಧ ಎಚ್.ಡಿ.ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.