Wednesday, September 30, 2026

BDA Apartments

ಮೈಸೂರು ಮಹಾರಾಣಿ ಕಾಲೇಜಿನಲ್ಲಿ ಪುಸ್ತಕ ಪ್ರದರ್ಶನ BDA JK_Adv BDA Adv
Home Front Page ಮೈಸೂರು ಮಹಾರಾಣಿ ಕಾಲೇಜಿನಲ್ಲಿ ಪುಸ್ತಕ ಪ್ರದರ್ಶನ

ಮೈಸೂರು ಮಹಾರಾಣಿ ಕಾಲೇಜಿನಲ್ಲಿ ಪುಸ್ತಕ ಪ್ರದರ್ಶನ

ಮೈಸೂರು ಮಹಾರಾಣಿ ಕಾಲೇಜಿನಲ್ಲಿ ಪುಸ್ತಕ ಪ್ರದರ್ಶನ puliyogare,ayyangar WhatsApp 11 16 at 12.03.42 PM

ಮೈಸೂರು,ನವೆಂಬರ್,25,2024 (www.justkannada.in): ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ವತಿಯಿಂದ ಮೈಸೂರಿನ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನಲ್ಲಿ  ಇಂದು ಪುಸ್ತಕ ಪ್ರದರ್ಶನ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಅಧ್ಯಾಪಕರು ಮತ್ತು ವಿದ್ಯಾರ್ಥಿಗಳಿಗೆ ಪುಸ್ತಕ ಪ್ರದರ್ಶನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾಲೇಜು ಪ್ರಾಂಶುಪಾಲ ಡಾ. ಅಬ್ದುಲ್ ರಹಿಮಾನ್ ಮತ್ತು ಇತರ ಅಧ್ಯಾಪಕರು ವಿದ್ಯಾರ್ಥಿಗಳ ಮುಂದೆ ಕೆಲವು ಪುಸ್ತಕಗಳನ್ನು ಓದಿದರು.

ಹಾಗೆಯೇ ಪುಸ್ತಕಗಳನ್ನು ಓದಿ ಜ್ಞಾನವನ್ನು ಪಡೆದುಕೊಳ್ಳಬೇಕು ಇದು ಭವಿಷ್ಯದ ಉದ್ದೇಶಕ್ಕೆ ಸಹಾಯ ಮಾಡುತ್ತದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಗ್ರಂಥಪಾಲಕರಾದ ಜಯಪ್ರಕಾಶ್ ಎಚ್ ಎಲ್, IQAC Coordinator ಡಾ. ನಂದಕುಮಾರ್ ವಿ, ಮತ್ತು ಇತರ ವಿಭಾಗದ ಅಧ್ಯಾಪಕರಾದ ಡಾ. ಪರಶುರಾಮ್ ಮೂರ್ತಿ, ಡಾ. ಥೋಯಾಜಾಕ್ಸಾ, ಡಾ. ರಾಮಚಂದ್ರ, ಡಾ. ರಮೇಶ್‌ಬಾಬು, ಡಾ. ರಮೇಶ್, ಡಾ. ಮಾದೇಸ್ವಾಮಿ ಹಾಗೂ ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Key words: Book exhibition, Maharani College, Mysore