ಇನ್ಮುಂದೆ ಮೆಕ್‌ ಡೊನಾಲ್ಡ್ಸ್‌ ನಲ್ಲಿ ಮಕ್ಕಳಿಗೆ ಓದಲು ಸಿಗಲಿದೆ ಪುಸ್ತಕ.

ಬೆಂಗಳೂರು,ಫೆಬ್ರವರಿ,17,2022(www.justkannada.in):  ಮೆಕ್‌ ಡೊನಾಲ್ಡ್ಸ್‌ನಲ್ಲಿ ಇಷ್ಟುದಿನ ಕೇವಲ ತಿಂಡಿ ಖರೀದಿಸಲು ಮಾತ್ರ ಅವಕಾಶವಿತ್ತು, ಇದೀಗ ತಿನ್ನುವುದರ ಜೊತೆಗೆ ಓದಲು ಪುಸ್ತಕವನ್ನೂ ಉಚಿತವಾಗಿ ಪಡೆಯಲು ಅವಕಾಶ ನೀಡಿದೆ.

ಹೌದು, ಮೆಕ್‌ ಡೊನಾಲ್ಡ್ಸ್‌ ದಕ್ಷಿಣ ಮತ್ತು ಪಶ್ಚಿಮ ಭಾಗದಲ್ಲಿ “ಹ್ಯಾಪಿ ಮೀಲ್ ರೀಡರ್ಸ್” ಕಾರ್ಯಕ್ರಮವನ್ನು ಪರಿಚಯಿಸುತ್ತಿದ್ದು, ಈ ಹ್ಯಾಪಿ ಮೀಲ್ ರೀಡರ್ಸ್‌ನಲ್ಲಿ ಮಕ್ಕಳಿಗಾಗಿ ಓದಲು ಪುಸ್ತಕವನ್ನೂ ನೀಡಲಾಗುತ್ತಿದೆ. ಇದೇ ಮೊದಲ ಬಾರಿಗೆ ವಿಭಿನ್ನ ರೀತಿಯಲ್ಲಿ ಮೆಕ್‌ಡೊನಾಲ್ಡ್ಸ್‌ ಈ ಕಾರ್ಯಕ್ರಮವನ್ನು ಪರಿಚಯಿಸಿದೆ.

ಈ ಹ್ಯಾಪಿ ಮೀಲ್ ರೀಡರ್ಸ್ ಪ್ರೋಗ್ರಾಮ್‌ನಲ್ಲಿ ಬರ್ಗರ್, ಪಾನೀಯ, ಒಂದು ಕಡ್ ಆವಿಯಲ್ಲಿ ಬೇಯಿಸಿದ ಕಾರ್ನ್ ಹಾಗೂ ವಿಶೇಷ ಪುಸ್ತಕವನ್ನು ಒಳಗೊಂಡಿರುತ್ತದೆ.

ಈ ಕುರಿತು ಮಾತನಾಡಿದ ಮೆಕ್‌ ಡೊನಾಲ್ಡ್ಸ್‌ ಡೈರೆಕ್ಟರ್ ಆರ್.ಪಿ. ಅರವಿಂದ, ಮಕ್ಕಳಿಗೆ ಪುಸ್ತಕ ಓದುವ ಹವ್ಯಾಸವನ್ನು ರೂಢಿಸುವ ಉದ್ದೇಶದಿಂದ ಮೆಕ್‌ ಡೊನಾಲ್ಡ್ಸ್‌ ಈ ಪ್ರಯತ್ನ ಮಾಡುತ್ತಿದೆ. ಮಕ್ಕಳಿಗೆ ಸಾಹಸಮಯ, ಡಿಟೆಕ್ಟಿವ್ ರೀತಿಯ ಕತೆಗಳೆಂದರೆ ಹೆಚ್ಚು ಪ್ರೀತಿ. ಇಂಥ ಪುಸ್ತಕ ಅವರ ಆಸಕ್ತಿಯನ್ನು ಇನ್ನಷ್ಟು ಹೆಚ್ಚಿಸುತ್ತವೆ. ಜೊತೆಗೆ ಈ ಪುಸ್ತಕದಲ್ಲಿ ಒಂದಷ್ಟು ಪ್ರಶ್ನೆ ಉತ್ತರ, ಕ್ವಿಜ್ ರೀತಿಯ ಪ್ರಶ್ನೆಗಳನ್ನೂ ಸಹ ಇಡಲಾಗುವುದು. ಇದು ಅವರಲ್ಲಿರುವ ಪ್ರತಿಭೆಯನ್ನು ಹೊರಹಾಕಲು ಅವಕಾಶ ನೀಡಿದಂತಾಗುತ್ತದೆ ಎಂದರು.

ಪ್ರತಿ ಬಾರಿ ಮೆಕ್‌ ಡೋನಾಲ್ಡ್ಸ್‌ ಗೆ ಬರುವವರು ಕೇವಲ ಮೀಲ್ಸ್ ತಿಂದು ಹೋಗುವ ಬದಲು ಈ ರೀತಿಯ ಆಸಕ್ತಿದಾಯಕ ಕ್ರಿಯೆಯನ್ನು ಅವಳವಡಿಸಲು ಈ ಬಾರಿ ಚಿಂತಿಸಿ, ಅದನ್ನು ಎಲ್ಲಾ ಮೆಕ್‌ ಡೊನಾಲ್ಡ್ಸ್‌ ಶಾಖೆಗಳಲ್ಲೂ ಅಳವಡಿಸಲು ಸೂಚಿಸಲಾಗಿದೆ ಎಂದರು. ಮೆಕ್‌ ಡೊನಾಲ್ಡ್ಸ್‌ ಭಾರತದಲ್ಲಿ 25ನೇ ವರ್ಷದ ವಾರ್ಷಿಕೋತ್ಸವದ ಸಂದರ್ಭದಲ್ಲಿ ಈ ವಿಶೇಷ ಪ್ರೋಗ್ರಾಮ್‌ನನ್ನು ಪರಿಚಯಿಸಲಾಗಿದೆ.

Key words:  book – children – McDonald’s