Sunday, September 27, 2026

BDA Apartments

ಜಗದೀಶ್ ಶೆಟ್ಟರ್ ಮನವೊಲಿಸುವ ಪ್ರಯತ್ನ ಆಗುತ್ತಿದೆ- ಸಿಎಂ ಬಸವರಾಜ ಬೊಮ್ಮಾಯಿ ...
Home Front Page ಜಗದೀಶ್ ಶೆಟ್ಟರ್ ಮನವೊಲಿಸುವ ಪ್ರಯತ್ನ ಆಗುತ್ತಿದೆ- ಸಿಎಂ ಬಸವರಾಜ ಬೊಮ್ಮಾಯಿ.

ಜಗದೀಶ್ ಶೆಟ್ಟರ್ ಮನವೊಲಿಸುವ ಪ್ರಯತ್ನ ಆಗುತ್ತಿದೆ- ಸಿಎಂ ಬಸವರಾಜ ಬೊಮ್ಮಾಯಿ.

ಹುಬ್ಬಳ್ಳಿ,ಏಪ್ರಿಲ್,15,2023(www.justkannada.in):   ರಾಜ್ಯವಿಧಾನಸಭಾ ಚುನಾವಣೆ ಹಿನ್ನೆಲೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಬಳಿಕ ಅಸಮಾಧಾನ ಸ್ಪೋಟಗೊಂಡಿದ್ದು ಹಲವು ಮುಖಂಡರು ಪಕ್ಷ ತೊರೆದರೇ ಹಲವು ಮುಖಂಡರು ರಾಜಕಾರಣಕ್ಕೆ ನಿವೃತ್ತಿ ಘೋಷಿಸಿದ್ದಾರೆ. ಹಾಗೆಯೇ ಟಿಕೆಟ್ ಮಿಸ್ ಆಗುವ ಭೀತಿ ಮಾಜಿ ಸಿಎಂ ಜಗದೀಶ್ ಶೆಟ್ಟರ್  ಗೆ ಎದುರಾಗಿದೆ.

ಈ ಹಿನ್ನೆಲೆಯಲ್ಲಿ  ಜಗದೀಶ್ ಶೆಟ್ಟರ್ ಅಸಮಾಧಾನ ವ್ಯಕ್ತಪಡಿಸಿ ದೆಹಲಿಗೆ ತೆರಳಿ ಪಕ್ಷದ ವರಿಷ್ಟರ ಬಳಿ ಮಾತಕತೆ ನಡೆಸಿದ್ದರು. ಈ ವಿಚಾರವಾಗಿ ಹುಬ್ಬಳ್ಳಿಯಲ್ಲಿ ಮಾತನಾಡಿರುವ ಸಿಎಂ ಬಸವರಾಜ ಬೊಮ್ಮಾಯಿ,  ಜಗದೀಶ್ ಶೆಟ್ಟರ್ ಮನವೊಲಿಸುವ ಕೆಲಸ ಆಗುತ್ತಿದೆ. ಇಂದು ಕೂಡ  ಶೇಟ್ಟರ್ ಮನವೊಲಿಸುತ್ತೇವೆ.  ನಿನ್ನೆ ಧರ್ಮೇಂದ್ರ ಪ್ರದಾನ್ ಜೊತೆ ಚರ್ಚೆಯಾಗಿದೆ.  ನಾನು ಹಾಗೂ ಶೆಟ್ಟರ್ ಇಬ್ಬರೂ ಸ್ನೇಹಿತರು. ಜಗದೀಶ್  ಶೆಟ್ಟರ್ ಅವರನ್ನ ಉಳಿಸಿಕೊಳ್ಳುವ ಪ್ರಯತ್ನ ಆಗುತ್ತಿದೆ ಎಂದರು.ಜಗದೀಶ್ ಶೆಟ್ಟರ್ ಮನವೊಲಿಸುವ ಪ್ರಯತ್ನ ಆಗುತ್ತಿದೆ cm bommai cm bommai 4

Key words:  Jagadish Shettar -trying – convince- CM -Basavaraja Bommai.