ಹಾಸನ,ಜೂನ್,16,2025 (www.justkannada.in): ಹಾಸನದಲ್ಲಿ ಮೂರು ಖಾಸಗಿ ಶಾಲಾ ಕಾಲೇಜುಗಳಿಗೆ ಬಾಂಬ್ ಬೆದರಿಕೆ ಸಂದೇಶ ಬಂದಿದ್ದು, ದುಷ್ಕರ್ಮಿಯೊಬ್ಬ ಬಾಂಬ್ ಸ್ಪೋಟಿಸುವುದಾಗಿ ಇ-ಮೇಲ್ ಸಂದೇಶ ರವಾನಿಸಿದ್ದಾನೆ.
ಹಾಸನದ ಮೂರು ಶಾಲೆಗಳಿಗೆ ಬಾಂಬ್ ಇಟ್ಟು ಸ್ಪೋಟಿಸುವುದಾಗಿ ಇ-ಮೇಲ್ ಬೆದರಿಕೆ ಸಂದೇಶ ಬಂದಿದೆ. ವಿದ್ಯಾಸೌಧ ಪಬ್ಲಿಕ್ ಶಾಲೆ, ವಿದ್ಯಾಸೌಧ ಕಿಡ್ಸ್ ಗೆ ಇಮೇಲ್ ಸಂದೇಶ ಬಂದಿದ್ದು, ಹಾಸನದ ವಿಜಯನಗರ, ಇಂಡಸ್ಟ್ರಿಯಲ್ ಏರಿಯಾ ಮತ್ತು ಕೆ ಆರ್ ಪುರಂ ಶಾಲೆಗಳ ಕಟ್ಟಡಗಳಿಗೆ ಬಾಂಬ್ ಇಟ್ಟು ಒಂದು ಗಂಟೆಗೆ ಕಟ್ಟಡ ಸ್ಪೋಟಿಸುವುದಾಗಿ ದುಷ್ಕರ್ಮಿಯೋಬ್ಬ ಇ-ಮೇಲ್ ಸಂದೇಶ ಕಳುಹಿಸಿದ್ದಾನೆ.
ವಿದ್ಯಾಸೌಧ ಶಾಲೆ ಹಾಗೂ ಕಿಡ್ಸ್ ಶಾಲೆ ಮಂಜೇಗೌಡ ಎಂಬವರಿಗೆ ಸೇರಿದ್ದು, ಈ ಕುರಿತು ಹಾಸನ ನಗರ ಗ್ರಾಮಾಂತರ ಠಾಣೆಗೆ ಪ್ರಾಂಶುಪಾಲರು ದೂರು ನೀಡಿದ್ದರು. ತಡರಾತ್ರಿಯೆ ಪೊಲೀಸರು ಮತ್ತು ಬಾಂಬ್ ನಿಷ್ಕ್ರಿಯದಳ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
Key words: Bomb threat, three schools, Hassan