‘ಪೊನ್ನಿಯಿನ್ ಸೆಲ್ವನ್-ಪಾರ್ಟ್ 1’ ಟೀಸರ್ ರಿಲೀಸ್ ಮಾಡಲಿದ್ದಾರೆ ಬಾಲಿವುಡ್ ಬಿಗ್ ಬಿ

ಬೆಂಗಳೂರು, ಜುಲೈ 08, 2022 (www.justkannada.in): ಮಣಿರತ್ನಂ ಅವರ ‘ಪೊನ್ನಿಯಿನ್ ಸೆಲ್ವನ್-ಪಾರ್ಟ್ 1’ (ಪಿಎಸ್ 1) ಚಿತ್ರದ ಹಿಂದಿ ಟೀಸರ್ ಅನ್ನು ಇಂದು ಡಿಜಿಟಲ್ ಆಗಿ ಬಿಡುಗಡೆ ಮಾಡಲಿದ್ದಾರೆ ಬಾಲಿವುಡ್ ಬಿಗ್ ಬಿ ಅಮಿತಾಬ್.

ಈ ವರ್ಷದ ಸೆಪ್ಟೆಂಬರ್ 30 ರಂದು ಬಿಡುಗಡೆಯಾಗಲಿರುವ ಈ ಚಿತ್ರದ ಮೊದಲ ಭಾಗವು ತಮಿಳು, ತೆಲುಗು, ಮಲಯಾಳಂ, ಕನ್ನಡ ಮತ್ತು ಹಿಂದಿ ಈ ಐದು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

ಎ.ಆರ್. ರೆಹಮಾನ್ ಈ ಮಹಾಕಾವ್ಯ ಐತಿಹಾಸಿಕಕ್ಕೆ ಸಂಗೀತ ಸಂಯೋಜಿಸುತ್ತಿದ್ದಾರೆ ಮತ್ತು ರವಿವರ್ಮನ್ ಅವರ ಛಾಯಾಗ್ರಹಣವಿದೆ.

ರಾಷ್ಟ್ರಪ್ರಶಸ್ತಿ ವಿಜೇತ ಕಲಾ ನಿರ್ದೇಶಕ ತೋಟಾ ತರಾನಿ ಅವರು ನಿರ್ಮಾಣ ವಿನ್ಯಾಸದ ಉಸ್ತುವಾರಿ ವಹಿಸಿಕೊಂಡಿದ್ದಾರೆ.

ಲೈಕಾ ಪ್ರೊಡಕ್ಷನ್ಸ್ ಪಿಎಸ್-1 ಅನ್ನು ಪ್ರಸ್ತುತಪಡಿಸುತ್ತದೆ. ಮದ್ರಾಸ್ ಟಾಕೀಸ್ ಮತ್ತು ಲೈಕಾ ಪ್ರೊಡಕ್ಷನ್ಸ್ ಜಂಟಿಯಾಗಿ ನಿರ್ಮಿಸುತ್ತಿರುವ ಈ ಚಿತ್ರವನ್ನು ಮಣಿರತ್ನಂ ಆ್ಯಕ್ಷನ್ ಕಟ್ ಹೇಳಿದ್ದಾರೆ.