ಮತ್ತೊಮ್ಮೆ ಅಣ್ಣವ್ರ ‘ಎಂದೆಂದೂ ನಿನ್ನನು ಮರೆತು ಬದುಕಿರಲಾರೆ’ ಹಾಡು ಹಾಡಿದ ಗೋವಿಂದ

ಬೆಂಗಳೂರು, ಮಾರ್ಚ್ 24, 2021 (www.justkannada.in): 

ಬಾಲಿವುಡ್​ ನಟ ಗೋವಿಂದ ಮತ್ತೊಮ್ಮೆ ಡಾ. ರಾಜ್​ಕುಮಾರ್​ ಅವರ ಎರಡು ಕನಸು ಸಿನಿಮಾದ ಹಾಡನ್ನು ಹಾಡಿದ್ದಾರೆ.

ಅಷ್ಟಕ್ಕೂ ಈ ಬಾರಿ ಗೋವಿಂದ ಹಾಡು ಹಾಡಲು ಕಾರಣ ನಟಿ ಹರ್ಷಿಕಾ ಪೂಣಚ್ಚ.

ಹೌದು. ಇತ್ತೀಚೆಗೆ ಹರ್ಷಿಕಾ ಪೂಣಚ್ಚ ಅವರು ಗೋವಿಂದ ಅವರನ್ನು ಭೇಟಿಯಾಗಿದ್ದರಂತೆ. ಈ ವೇಳೆ ಹರ್ಷಿಕಾ ಮನವಿ ಮೇರೆಗೆ ಗೋವಿಂದ ಎಂದೆಂದೂ ನಿನ್ನನು ಮರೆತು ಬದುಕಿರಲಾರೆ  ಹಾಡು ಹಾಡಿದ್ದಾರೆ.

ಹರ್ಷಿಕಾ ಗೋವಿಂದ ಅವರ ಈ ಹಾಡಿನ ವಿಡಿಯೋವನ್ನು ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಅಂದಹಾಗೆ ಗೋವಿಂದ ಕನ್ನಡ ಹಾಡನ್ನು ಹಾಡಿರುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ರಿಯಾಲಿಟಿ ಶೋ ಒಂದರಲ್ಲೂ ಇದೇ ಹಾಡನ್ನು ಹಾಡಿದ್ದರು.