ಮಹಿಳೆ ಮೇಲೆ ಹಲ್ಲೆ ಮಾಡಿದ ಬಿಎಂಟಿಸಿ ಕಂಡಕ್ಟರ್ ಪೊಲೀಸರ ವಶಕ್ಕೆ.

ಬೆಂಗಳೂರು, ಮಾರ್ಚ್,26,2024, (www.justkannada.in) ಬಸ್ ಟಿಕೆಟ್ ವಿಚಾರವಾಗಿ  ಮಹಿಳೆ ಮೇಲೆ ಹಲ್ಲೆ ಮಾಡಿದ ಬಿಎಂಟಿಸಿ ಬಸ್ ನಿರ್ವಾಹಕರೊಬ್ಬರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಹೊನ್ನಪ್ಪ ಎಂಬುವವರೇ ಮಹಿಳೆ ಮೇಲೆ ಹಲ್ಲೆ ಮಾಡಿದ್ದ ಬಿಎಂಟಿಸಿ ಕಂಡಕ್ಟರ್.  ಸಿದ್ದಾಪುರ ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು. ತನ್ಜಿಲಾ ಇಸ್ಮಾಯಿಲ್ ಎಂಬ ಮಹಿಳೆ ಟಿಕೆಟ್​ ಕೇಳಿದ್ದಾರೆ. ಈ ವೇಳೆ ಕಂಡಕ್ಟರ್, ಕೊಡ್ತಿನಿ‌ ಇರಿ ಎಂದಿದ್ದು,  ಇದೇ ವಿಚಾರಕ್ಕೆ ಮಾತಿಗೆ ಮಾತು ಬೆಳೆದು ಗಲಾಟೆ ನಡೆದಿದೆ. ಈ ವೇಳೆ ಮಹಿಳೆ ಮೇಲೆ ಕಂಡಕ್ಟರ್ ಹೊನ್ನಪ್ಪ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.

ಈ ಕುರಿತು ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕಂಡಕ್ಟರ್ ಹೊನ್ನಪ್ಪರನ್ನು  ಸಿದ್ದಾಪುರ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.  ಹೊನ್ನಪ್ಪ ಜಂಬೂಸವಾರಿದಿಣ್ಣೆಯಲ್ಲಿರುವ ಬಿಎಂಟಿಸಿ ಬಸ್ ಡಿಪೋ 34ರ ಕಂಡಕ್ಟರ್ ಆಗಿದ್ದಾರೆ.  ಹಲ್ಲೆ ನಡೆದಿರುವ ದೃಶ್ಯ ಪ್ರಯಾಣಿಕರ ಮೊಬೈಲ್​ನಲ್ಲಿ ಸೆರೆಯಾಗಿತ್ತು.

Key words: BMTC,conductor, assault,woman