BMTC ಬಸ್ ಅಪಘಾತ: ಯುವತಿ ಬಲಿ

ಬೆಂಗಳೂರು,ಜುಲೈ, 18,2025 (www.justkannada.in):  ಎಲೆಕ್ಟ್ರಿಕ್ ಬಿಎಂಟಿಸಿ ಬಸ್  ಹರಿದು ಯುವತಿ ಬಲಿಯಾಗಿರುವ ಘಟನೆ ಬೆಂಗಳೂರಿನ ಪೀಣ್ಯಾದಲ್ಲಿ ನಡೆದಿದೆ.

ಸುಮ ಮೃತಪಟ್ಟ ಯುವತಿ.  ವೇಗವಾಗಿ ಬಂದ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ನಿಯಂತ್ರಣ ತಪ್ಪಿ ಪುಟ್ ಪಾತ್ ಮೇಲೆ ನುಗ್ಗಿ  ಕ್ಯಾಂಟಿನ್ ಗೆ ಅಪ್ಪಳಿಸಿದೆ. ಈ ವೇಳೆ ಬಸ್ ಕಾಯುತ್ತ ನಿಂತಿದ್ದ ಯುವತಿ ಸುಮಾ ಮೇಲೆ ಬಸ್ ಹರಿದಿದೆ. ಕೆಲಸಕ್ಕೆ ಹೋಗಲು ಪೀಣ್ಯ 2ನೇ ಹಂತದ ಬಳಿ ಬೆಳಿಗ್ಗೆ ಪುಟ್ ಪಾತ್ ಮೇಲೆ ಸುಮಾ ನಿಂತಿದ್ದರು.

ಈ ವೇಳೆ ಮೆಜೆಸ್ಟಿಕ್‌ನಿಂದ ಪೀಣ್ಯ 2ನೇ ಹಂತದ ಕಡೆಗೆ ಹೋಗುತ್ತಿದ್ದ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಚಾಲಕನ ನಿಯಂತ್ರಣ ತಪ್ಪಿ ಪುಟ್ ಪಾತ್ ಮೇಲೆ ನುಗ್ಗಿ ಹೊಟೇಲ್ ಗೆ ಅಪ್ಪಳಿಸಿದೆ. ಬಸ್ ಗೆ ಸಿಲುಕಿದ ಸುಮಾ ಗಂಭೀರವಾಗಿ ಗಾಯಗೊಂಡಿದ್ದು,ಕೂಡಲೇ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಸುಮಾ ಅಷ್ಟರಲ್ಲಾಗಲೇ ಮೃತಪಟ್ಟಿದ್ದಾರೆ. ಇತರ ಐವರಿಗೆ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಪೀಣ್ಯ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.vtu

Key words: BMTC, bus, accident, Young woman, dies