ಮಾ.3 ರಂದು ರಕ್ತಚಂದ್ರಗ್ರಹಣ: ನಾನಾ ದೇಗುಲಗಳಲ್ಲಿ ಭಕ್ತರ ದರ್ಶನ ಸಮಯ ಬದಲಾವಣೆ

ಮೈಸೂರು,ಫೆಬ್ರವರಿ,28,2026 (www.justkannada.in):  ಮಾರ್ಚ್ 3 ರಂದು ರಕ್ತಚಂದ್ರಗ್ರಹಣ ಹಿನ್ನೆಲೆಯಲ್ಲಿ ಮೈಸೂರು ಚಾಮುಂಡೇಶ್ವರಿ ದೇವಾಲಯ ಸೇರಿ ರಾಜ್ಯದ ಹಲವು ದೇಗುಲಗಳಲ್ಲಿ ಭಕ್ತರ ದರ್ಶನದ ಸಮಯವನ್ನ ಬದಲಾವಣೆ ಮಾಡಲಾಗಿದೆ.

ಮಾರ್ಚ್ 3 ರಂದು ರಕ್ತ ಚಂದ್ರಗ್ರಹಣ ಹಿನ್ನೆಲೆಯಲ್ಲಿ ಅಂದು ಮೈಸೂರಿನ ಚಾಮುಂಡಿ ದೇಗುಲದ ಪೂಜೆಯಲ್ಲಿ ವ್ಯತ್ಯಾಸವಾಗಲಿದೆ.  ಮಧ್ಯಾಹ್ನ 3 ರಿಂದ ರಾತ್ರಿ 8.30ರವರೆಗೆ ಭಕ್ತರ ದರ್ಶನಕ್ಕೆ ಅವಕಾಶವಿಲ್ಲ. ಗ್ರಹಣದ ಸಮಯದಲ್ಲಿ ತಾಯಿ ಚಾಮುಂಡೇಶ್ವರಿಗೆ ವಿಶೇಷ ಅಭಿಷೇಕ ನಡೆಸಲಾಗುತ್ತದೆ.

ಮಂಗಳೂರಿನ ಕುದ್ರೋಳಿಯ ಗೋಕರ್ಣನಾಥ ದೇಗುಲದಲ್ಲೂ ಮಾರ್ಚ್ 3 ರಂದು  ಭಕ್ತರ ದರ್ಶನ ಸಮಯವನ್ನು ಬದಲಾವಣೆ ಮಾಡಲಾಗಿದೆ. ಗ್ರಹಣದ ದಿನ ಮಧ್ಯಾಹ್ನ 1.30ರವರೆಗೆ ಮಾತ್ರ ಭಕ್ತರ ದರ್ಶನಕ್ಕೆ ಅವಕಾಶವಿರಲಿದೆ . ಸಂಜೆ 7.30ರ ನಂತರ ಮತ್ತೆ ಭಕ್ತರ ದರ್ಶನಕ್ಕೆ ಅವಕಾಶವಿರಲಿದೆ.

ಧರ್ಮಸ್ಥಳದ ಮಂಜುನಾಥಸ್ವಾಮಿ ದೇಗುಲದಲ್ಲೂ  ಅಂದು ಬೆಳಿಗಿನ ಅವಧಿ 6.30ರಿಂದ ಮಧ್ಯಾಹ್ನ 1.30ರವರೆಗೆ ಮಾತ್ರ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶವಿರಲಿದೆ. ಮಧ್ಯಾಹ್ನ 1.30ರ ನಂತರ ದರ್ಶನ ಸ್ಥಗಿತವಾಗಲಿದೆ. ರಾತ್ರಿ 7.30ಕ್ಕೆ  ಎಂದಿನಂತೆ ದೇವರ ದರ್ಶನಕ್ಕೆ ಅವಕಾಶ ಇರಲಿದೆ.

Key words: Blood Moon Eclipse, March 3rd, temples, devotees