ಬೆಂಗಳೂರು,ಏಪ್ರಿಲ್,17,2026 (www.justkannada.in): ಸಚಿವ ಜಮೀರ್ ಅಹ್ಮದ್ ಖಾನ್ ಅವರಿಗೂ ಉಪಚುನಾವಣಾ ಫಲಿತಾಂಶ ಬಳಿಕ ಕೋಕ್ ನೀಡಲಾಗುತ್ತದೆ ಎಂಬ ಸುದ್ದಿ ಹರಿದಾಡುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಎಂಎಲ್ ಸಿ ಬಿ.ಕೆ ಹರಿಪ್ರಸಾದ್ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಮಾತನಾಡಿರುವ ಬಿಕೆ ಹರಿಪ್ರಸಾದ್, ಬೈಎಲೆಕ್ಷ ನ್ ಬಳಿಕ ನಡೆಯುತ್ತಿರುವ ಬೆಳವಣಿಗೆ ಒಳ್ಳೆಯದಲ್ಲ. ಸಚಿವ ಜಮೀರ್ ಅಹ್ಮದ್ ಖಾನ್ ಹಿರಿಯ ನಾಯಕ. ಸಂಪುಟದ ಹಿರಿಯ ಸದಸ್ಯರು. ಜಮೀರ್ ರಾಜೀನಾಮೆ ವದಂತಿ ಹಬ್ಬಿದೆ. ಇವರ ಬಗ್ಗೆ ಜಾಲತಾಣದಲ್ಲಿ ಹರಿದಾಡುತ್ತಿರುವ ಸುದ್ದಿ ಸರಿಯಲ್ಲ.
ಈ ವದಂತಿ ಬಗ್ಗೆ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಬೇಕು ರಾಜೀನಾಮೆ ವದಂತಿ ಹಿಂದೆ ಪಟ್ಟಭದ್ರ ಹಿತಾಸಕ್ತಿ ಕೂಡಿದೆ. ಪಕ್ಷ ವಿರೋಧಿ ಚಟುವಟಿಕೆ ತಡೆಗೆ ಶಿಸ್ತುಸಮಿತಿಗೆ ಇದೆ. ಇದಕ್ಕೆ ದೂರು ನೀಡಬೇಕು ಆತುರದ ನಿರ್ಧಾರ ಸರಿಯಲ್ಲ ಎಂದು ಬಿ.ಕೆ ಹರಿಪ್ರಸಾದ್ ತಿಳಿಸಿದರು.
Key words: Rumors, about, Minister, Jamir, BK Hariprasad







