Thursday, August 6, 2026

BDA Apartments

Home Front Page ಸಿದ್ಧರಾಮಯ್ಯ  ದೊಡ್ಡ ಭಯೋತ್ಪಾದನಕ ಎಂದ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್.

ಸಿದ್ಧರಾಮಯ್ಯ  ದೊಡ್ಡ ಭಯೋತ್ಪಾದನಕ ಎಂದ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್.

ಬೆಂಗಳೂರು,ಸೆಪ್ಟಂಬರ್,29,2021(www.justkannada.in):  ಆರ್​​ ಎಸ್ ಎಸ್ ನವರದ್ದು ತಾಲಿಬಾನ್​ ಸಂಸ್ಕೃತಿ ಎಂದು ಟೀಕಿಸಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನ  ದೊಡ್ಡ ಭಯೋತ್ಪಾದಕ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿದ್ದಾರೆ.

ಇಂದು ಮಾಧ್ಯಮಗಳ ಜತೆ ಮಾತನಾಡಿದ ನಳೀನ್ ಕುಮಾರ್ ಕಟೀಲ್, ಸಿದ್ದರಾಮಯ್ಯ ಅತಂತ್ರ ಸ್ಥಿತಿಯಲ್ಲಿ ಇದ್ದಾರೆ. ಸಿದ್ದರಾಮಯ್ಯ ಆಡಳಿತದಲ್ಲಿ ಅನೇಕರ ಹತ್ಯೆಯಾಯ್ತು. ಅವರ ಆಡಳಿತದಲ್ಲಿ ರಾಜ್ಯದಲ್ಲಿ ತಾಲಿಬಾನ್​ ಸ್ಥಿತಿಯೇ ಇತ್ತು. ರಾಜ್ಯದಲ್ಲಿ 24 ಹಿಂದೂ ಯುವಕರನ್ನು ಕೊಲೆಗೈಯಲಾಯ್ತು. ದಕ್ಷಿಣ ಕನ್ನಡದಲ್ಲಿ ಪ್ರಶಾಂತ್​ ಪೂಜಾರಿ, ಶರತ್​ ಮಡಿವಾಳ, ದೀಪಕ್​ ರಾವ್​, ಮಡಿಕೇರಿ ಕುಟ್ಟಪ್ಪ ಎಲ್ಲರೂ ಸಿದ್ದರಾಮಯ್ಯ ಆಡಳಿತಾವಧಿಯಲ್ಲೇ ಸಾವನ್ನಪ್ಪಿದ್ದಾರೆ ಎಂದು ಕಿಡಿಕಾರಿದರು.

ಹಾಗೆಯೇ ಎಟಿಎಂ ಒಳಗೆ ಹೋದ ಮಹಿಳೆಯ ಮೇಲೆ ಹಲ್ಲೆಯಾಯ್ತು. ಸುಳ್ಯದಲ್ಲಿ ಕಾಲೇಜಿಗೆ ಹೋದ ವಿದ್ಯಾರ್ಥಿನಿಯನ್ನು ಹತ್ಯೆ ಮಾಡಲಾಯ್ತು. ಇದೆಲ್ಲ ನೋಡಿದರೇ ಸಿದ್ದರಾಮಯ್ಯ ಆಡಳಿತ ತಾಲಿಬಾನ್​ ಆಡಳಿತವಾಗಿದೆ. ಇದೇ ಕಾರಣಕ್ಕೆ ನಾನು ಸಿದ್ದರಾಮಯ್ಯರನ್ನು ಭಯೋತ್ಪಾದಕ ಎಂದು ಕರೆಯುತ್ತೇನೆ ಎಂದು ನಳೀನ್ ಕುಮಾರ್ ಕಟೀಲ್ ವಾಗ್ದಾಳಿ ನಡೆಸಿದರು.

Key words: BJP -president -Nalin Kumar Katil – called -Siddaramaiah – big terrorist.