ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ ನಡ್ಡಾ ಮತ್ತು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭೇಟಿ ಮಾಡಿ ಚರ್ಚಿಸಿದ ಸಿಎಂ ಬಿಎಸ್ ವೈ.

ನವದೆಹಲಿ,ಜುಲೈ,17,2021(www.justkannada.in):   ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ ನಡ್ಡಾ ಮತ್ತು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನ ಸಿಎಂ ಬಿಎಸ್ ಯಡಿಯೂರಪ್ಪ ಭೇಟಿ ಮಾಡಿ ಚರ್ಚೆ ನಡೆಸಿದರು.jk

ಮೊದಲು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ ನಡ್ಡಾ ಅವರನ್ನು ಭೇಟಿ ಮಾಡಿದ ಸಿಎಂ ಬಿಎಸ್ ಯಡಿಯೂರಪ್ಪ ಕೆಲಕಾಲ ಚರ್ಚಿಸಿದರು. ನಂತರ ಮಾಧ್ಯಮಗಳ ಜತೆ ಮಾತನಾಡಿದ  ಅವರು, ನಾನು ದೆಹಲಿಗೆ ಬಂದಿರುವುದು ರಾಜ್ಯ ರಾಜಕೀಯ ಮತ್ತು ಪಕ್ಷದ ಬೆಳವಣಿಗೆ ಬಗ್ಗೆ ಪ್ರಸ್ತಾಪಿಸಲು ಅಷ್ಟೇ, ರಾಜೀನಾಮೆ ಬಗ್ಗೆ ಒಂದು ಮಾತು ಸಹ ಚರ್ಚೆಗಳು ನಡೆದಿಲ್ಲ ಹಾಗೂ ಮತ್ತೆ ರಾಜ್ಯದಲ್ಲಿ ಬಿ,ಜೆ,ಪಿ ಪಕ್ಷವನ್ನು ಅಧಿಕಾರಕ್ಕೆ ತರಲು ಜೆ.ಪಿ ನಡ್ಡಾ ಜೊತೆ ಚರ್ಚೆ ಮಾಡಲು ಬಂದಿರುವುದಾಗಿ ತಿಳಿಸಿದರು.

ನನಗೆ ರಾಜೀನಾಮೆ ನೀಡಲು ಯಾವುದೇ ರೀತಿಯ ಸೂಚನೆಗಳು ಬಂದಿಲ್ಲ, ಹಾಗೂ ರಾಜೀನಾಮೆ ನೀಡುವ ಪ್ರಸಂಗವು ಕೂಡ ಇಲ್ಲ ಎಂದು ಹೇಳಿದ್ದಾರೆ.

ನಂತರ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನ ಭೇಟಿಯಾಗಿ ಚರ್ಚಿಸಿದ ಬಳಿಕ ಮಾತನಾಡಿದ ಸಿಎಂ ಬಿಎಸ್ ಯಡಿಯೂರಪ್ಪ, ರಾಜನಾಥ್ ಸಿಂಗ್ ಖುಷಿಯಾಗಿ ಮಾತನಾಡಿದರು  ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಿಕ್ಕೆ ತರಬೇಕು ಈ ನಿಟ್ಟಿಲ್ಲಿ ಪ್ರಯತ್ನಿಸುವಂತೆ ಸಲಹೆ ನೀಡಿದರು ಎಂದರು.

Key words: BJP President -JP Nadda – Union Defense Minister -rajnath Singh -met – CM Bs yeddyurappa