Sunday, August 23, 2026

BDA Apartments

Home Front Page ಬಿಜೆಪಿ ಅಧಿಕಾರಕ್ಕೆ ಬಂದ್ರೆ ಮಹಿಳೆಯರು ಮಂಗಳಸೂತ್ರ ಮತ್ತು ಮಕ್ಕಳನ್ನೂ ಕಳೆದುಕೊಳ್ತಾರೆ- ಯತೀಂದ್ರ ಸಿದ್ದರಾಮಯ್ಯ.

ಬಿಜೆಪಿ ಅಧಿಕಾರಕ್ಕೆ ಬಂದ್ರೆ ಮಹಿಳೆಯರು ಮಂಗಳಸೂತ್ರ ಮತ್ತು ಮಕ್ಕಳನ್ನೂ ಕಳೆದುಕೊಳ್ತಾರೆ- ಯತೀಂದ್ರ ಸಿದ್ದರಾಮಯ್ಯ.

ಮೈಸೂರು,ಏಪ್ರಿಲ್,22, 2024 (www.justkannada.in):  ಬಿಜೆಪಿ ಅಧಿಕಾರಕ್ಕೆ ಬಂದ್ರೆ ಎಲ್ಲ ಮಹಿಳೆಯರು ಮಂಗಳ ಸೂತ್ರ ಮಾತ್ರ ಅಲ್ಲ, ತಮ್ಮ ಗಂಡ, ಮಕ್ಕಳನ್ನ ಕಳೆದುಕೊಳ್ಳುತ್ತಾರೆ ಎಂದು ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಇಂದು ಮೈಸೂರಿನಲ್ಲಿ ಮಾತನಾಡಿ ಪ್ರಧಾನಿ ಮೋದಿ ವಿರುದ್ದ ಕಿಡಿಕಾರಿದ ಯತೀಂದ್ರ ಸಿದ್ದರಾಮಯ್ಯ, 70 ವರ್ಷಗಳಿಂದ ರಾಜ್ಯದಲ್ಲಿ ವಿವಿಧ ಪಕ್ಷ ಆಡಳಿತ ನಡೆಸಿವೆ. ಹಿಂದೂಗಳಿಗೆ ಅನ್ಯಾಯ ಆಗಿಲ್ಲ. ಬಿಜೆಪಿ ಅಧಿಕಾರಕ್ಕೆ ಬಂದ್ರೆ ಎಲ್ಲ ಮಹಿಳೆಯರ ಮಂಗಳ ಸೂತ್ರ ಮಾತ್ರ ಅಲ್ಲ, ತಮ್ಮ ಗಂಡಂದಿರು, ತಮ್ಮ ಮಕ್ಕಳನ್ನ ಕಳೆದುಕೊಳ್ಳುತ್ತಾರೆ. ಬಿಜೆಪಿ ಕೋಮುಗಲಾಭೆ, ದೋಂಬಿ ಮಾಡಿ ಅವ್ರ ಮಕ್ಕಳನ್ನ ಸಾಯುವಂತೆ ಮಾಡ್ತಾರೆ.  ಒಬ್ಬರನ್ನೊಬ್ಬರು ಬಡಿದಾಡಿಕೊಳ್ತಾರೆ. ಸಮಾಜವನ್ನ ಅಧಪತನಕ್ಕೆ ಹೋಗುವಂತೆ ಮಾಡ್ತಾರೆ. ಮಕ್ಕಳನ್ನು ಕೋಮು ಗಲಭೆಯಲ್ಲಿ ತೊಡಗಿಸಿ ನಿರುದ್ಯೋಗಿಯಾಗಿ ಮಾಡುತ್ತಾರೆ. ಯಾವುದೇ ಪ್ರಜಾ ಪ್ರಭುತ್ವದಲ್ಲೂ ಈ ರೀತಿ ಮಾತನಾಡೋಲ್ಲ ಎಂದು ಹರಿಹಾಯ್ದರು.

ಮೋದಿ ಅವರು ತುಚ್ಛವಾಗಿ ಮಾತನಾಡಿದ್ದಾರೆ. ಮತಿಯ ಭಾವನೆ ಕೆರಳಿಸುವ ರೀತಿ ಮೋದಿ ಮಾತನಾಡಿದ್ದಾರೆ. ಚುನಾವಣಾ ಆಯೋಗ ಯಾಕೆ ಕಣ್ಣು ಮುಚ್ಚಿ ಕುಳಿತಿದೆಯೋ ಗೊತ್ತಿಲ್ಲ ಎಂದು ಯತೀಂದ್ರ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

Key words: BJP, power, PM, Modi, Yatindra Siddaramaiah