ಬಡವರ  ಹಸಿವಿನ ಮೇಲೆ ಬಿಜೆಪಿ ರಾಜಕಾರಣ : ಕೆ.ಎಸ್ ಶಿವರಾಮ್ ಕಿಡಿ.

kannada t-shirts

ಮೈಸೂರು,ಜೂನ್,30,2023(www.justkannada.in): ಅನ್ನಭಾಗ್ಯ ಯೋಜನೆಯಡಿ  ರಾಜ್ಯ ಸರ್ಕಾರ ತಲಾ 10 ಕೆಜಿ ಅಕ್ಕಿ ನೀಡುವ ನಿಲುವು ಸ್ವಾಗತಾರ್ಹ. ಆದರೆ ಬಡವರ  ಹಸಿವಿನ ಮೇಲೆ ಬಿಜೆಪಿ ರಾಜಕಾರಣ ಮಾಡುತ್ತಿದೆ ಎಂದು ಹಿಂದುಳಿದ ಜಾಗೃತ ವೇದಿಕೆ ಅಧ್ಯಕ್ಷ  ಕೆ.ಎಸ್ ಶಿವರಾಮ್ ಕಿಡಿ ಕಾರಿದರು.

ಅಕ್ಕಿ ದೊರಕದೆ ಹಿನ್ನಲೆಯಲ್ಲಿ 5 ಕೆಜಿ ಅಕ್ಕಿ ಜೊತೆ 5 ಅಕ್ಕಿಗೆ ತಗುಲುವ ಹಣ ಸಂದಾಯ  ಮಾಡಲು ಸರ್ಕಾರ ನಿರ್ಧರಿಸಿರುವುದನ್ನ ಟೀಕಿಸಿರುವ ಪ್ರತಿಪಕ್ಷಗಳ ವಿರುದ್ದ  ಕೆ.ಎಸ್ ಶಿವರಾಮ್ ಕಿಡಿಕಾರಿದರು.

ಬಿಜೆಪಿ ಬಡವರ ಹಸಿವಿನ ಮೇಲೆ ರಾಜಕಾರಣ ಮಾಡುತ್ತಿದೆ. ಈ ಹಿಂದೆ ಅಕ್ಕಿ ಕೊಡಲಿಲ್ಲ ಅಂದ್ರೆ ಹಣ ನೀಡಿ ಎಂದು ನೀವೆ ಹೇಳಿದ್ರಿ ಇಂದು ಅದನ್ನು ವಿರೋಧಿಸುತ್ತಿದ್ದೀರಿ. ಅನ್ನಭಾಗ್ಯ ಯೋಜನೆ ಜಾರಿಗೊಂಡ್ರೆ ಬಿಜೆಪಿ ನೆಲೆ ಇರಲ್ಲ ಅಂತ ಭಯ ಪಟ್ಟಿದ್ದೀರಿ . ಅದಕ್ಕೆ ಹೀಗೆ ಇಲ್ಲಸಲ್ಲದ ವಾದ ಮಾಡ್ತಿದ್ದೀರಾ. ನಿಮ್ಮನ್ನು ಈಗಾಗಲೇ ಜನ  ತಿರಸ್ಕರಿಸಿದ್ದಾರೆ ಹೀಗೆ ಮಾಡಿದ್ರೆ ಲೋಕಸಭೆ ಚುನಾವಣೆಯಲ್ಲೂ ಮನೆಗೆ ಕಳಿಸ್ತಾರೆ ಎಂದು ವಾಗ್ದಾಳೀ ನಡೆಸಿದರು.

ಕಾಂಗ್ರೆಸ್ ಸರ್ಕಾರದ ಉಚಿತ ಸವಲತ್ತುಗಳು ಒಂದು ಅವಲೋಕನ ಎಂಬ ಸಂವಾದ ಕಾರ್ಯಕ್ರಮವನ್ನು ಜುಲೈ 2 ರಂದು ವಿಶ್ವವಿದ್ಯಾಲಯದ ವಿಜ್ಞಾನ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕೆ .ಎಸ್ ಶಿವರಾಮ್ ತಿಳಿಸಿದರು.

ಪ್ರಸ್ತುತ ರಾಜ್ಯ ಸರ್ಕಾರದ ಗ್ಯಾರೆಂಟಿ ಯೋಜನೆ ಜಾರಿಯಾದ್ರೆ ರಾಜ್ಯ ದಿವಾಳಿಯಾಗುತ್ತೆ ಎಂಬ ಚರ್ಚೆ ಜೋರಾಗಿದೆ.  ಐದು ಗ್ಯಾರೆಂಟಿ ಗಳು ಜಾರಿಯಿಂದ ಉಂಟಾಗುವ ಸವಾಲುಗಳು ಹಾಗೂ ಸಾಧಕ-ಭಾದಕಗಳ ಕುರಿತು ಚರ್ಚೆ ಮತ್ತು ಸಂವಾದ ಏರ್ಪಡಿಸಲಾಗಿದ್ದು ನಂಜನಗೂಡು ತಾಲ್ಲೂಕಿನ ಫಲಾನುಭವಿ ಮಹಿಳೆ ಕಾರ್ಯಕ್ರಮ ಉದ್ಘಾಟಿಸಿಲಿದ್ದು ಕಾರ್ಯಕ್ರಮದಲ್ಲಿ ಹಲವು ಚಿಂತಕರು ,ಸಂಘಟನೆ ಮುಖ್ಯಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಿ ವಿಷಯ ಮಂಡಿಸಲಿದ್ದಾರೆ ಎಂದು ಕೆ.ಎಸ್ ಶಿವರಾಂ ತಿಳಿಸಿದರು.

Key words: BJP -politics – hunger – poor- KS Shivaram -mysore

website developers in mysore