Sunday, August 23, 2026

BDA Apartments

Home Front Page ಹೊಟ್ಟೆ ಹುಣ್ಣಾದರೆ ಮಜ್ಜಿಗೆ ಕುಡಿದರಾಯಿತು- ಸಂಧಾನ ಸಭೆ ಬಳಿಕ ಸಂಸದ ಕೆ.ಸುಧಾಕರ್ ನುಡಿ

ಹೊಟ್ಟೆ ಹುಣ್ಣಾದರೆ ಮಜ್ಜಿಗೆ ಕುಡಿದರಾಯಿತು- ಸಂಧಾನ ಸಭೆ ಬಳಿಕ ಸಂಸದ ಕೆ.ಸುಧಾಕರ್ ನುಡಿ

ಬೆಂಗಳೂರು,ಜುಲೈ,9,2026 (www.justkannada.in):  ಬಿಜೆಪಿಯಲ್ಲಿ ಸಂಸದ ಡಾ.ಕೆ.ಸುಧಾಕರ್ ಮತ್ತು ಶಾಸಕ ಎಸ್.ಆರ್ ವಿಶ್ವನಾಥ್ ನಡುವೆ ಉಂಟಾಗಿರುವ ಮುನಿಸು ತಣ್ಣಗಾಗಿಸಲು ಇಂದು ರಾಜ್ಯ ಬಿಜೆಪಿ ಉಸ್ತುವಾರಿ ರಾಧಾಮೋಹನ್ ದಾಸ್ ನೇತೃತ್ವದಲ್ಲಿ ಸಂಧಾನ ಸಭೆ ನಡೆಯಿತು.

ಸಂಧಾನ ಸಭೆ ಬಳಿಕ ಮಾತನಾಡಿದ ಸಂಸದ ಡಾ.ಕೆ.ಸುಧಾಕರ್,  ವ್ಯತ್ಯಾಸಗಳನ್ನು  ಹೊಟ್ಟೆಯಲ್ಲಿಟ್ಟುಕೊಂಡು ಮುಂದೆ ಸಾಗಬೇಕು.  ಪಕ್ಷ ಸಂಘಟನೆ ದೃಷ್ಠಿಯಲ್ಲಿ ಎಲ್ಲವನ್ನೂ ಮರೆತು ಒಂದಾಗಬೇಕು  ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಮಾಡಬೇಕೆಂದು ಹೇಳಿದ್ದಾರೆ.  ಏನೇ ಇದ್ದರೂ ಹೊಟ್ಟೆಯಲ್ಲಿಟ್ಟುಕೊಂಡು ಸಂಘಟನೆ ಮಾಡುತ್ತೇವೆ. ವೈಯಕ್ತಿಕವಾಗಿ ಏನೇ ಇದ್ದರೂ ಹೊಟ್ಟೆಗೆ ಹಾಕಿಕೊಳ್ಳುತ್ತೇವೆ.  ಹೊಟ್ಟೆ ಹುಣ್ಣಾದರೆ ಮಜ್ಜಿಗೆ ಕುಡಿದರೇ ಆಯಿತು ಎಂದು ವ್ಯಂಗ್ಯವಾಗಿ ನುಡಿದಿದ್ದಾರೆ.

ರಾಜ್ಯ ಉಸ್ತುವಾರಿ ರಾಧಾಮೋಹನ್ ದಾಸ್ ಅವರ  ಬಳಿ ಯಾವುದೇ ಬೇಡಿಕೆ ಇಟ್ಟಿಲ್ಲ.  ದೂರನ್ನೂ ನೀಡಿಲ್ಲ ಎಂದು ಸಂಸದ ಡಾ.ಕೆ.ಸುಧಾಕರ್ ತಿಳಿಸಿದರು.

Key words: BJP, MP, Dr. K. Sudhakar,  MLA, S.R. Vishwanath, Radha Mohan Das