Sunday, September 13, 2026

BDA Apartments

Home Front Page ಬಿಜೆಪಿಯವರು ಮೋದಿ ಆದರೂ ಕರೆಸಲಿ, ಅಮೆರಿಕ ಅಧ್ಯಕ್ಷರನ್ನಾದರೂ ಕರೆಸಲಿ: ನನ್ನ ಕಾರ್ಯಕ್ರಮಕ್ಕೆ ಸಾಟಿ ಇಲ್ಲ- ಮಾಜಿ...

ಬಿಜೆಪಿಯವರು ಮೋದಿ ಆದರೂ ಕರೆಸಲಿ, ಅಮೆರಿಕ ಅಧ್ಯಕ್ಷರನ್ನಾದರೂ ಕರೆಸಲಿ: ನನ್ನ ಕಾರ್ಯಕ್ರಮಕ್ಕೆ ಸಾಟಿ ಇಲ್ಲ- ಮಾಜಿ ಸಿಎಂ ಹೆಚ್.ಡಿಕೆ.

ಬೆಂಗಳೂರು,ಏಪ್ರಿಲ್,25,2023(www.justkannada.in):  ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆ ಪ್ರಚಾರ ಅಬ್ಬರ ಜೋರಾಗಿದ್ದು ರಾಜ್ಯ ಬಿಜೆಪಿ ಕೇಂದ್ರದ ನಾಯಕರನ್ನ ಕರೆಸಿ ರೋಡ್ ಶೋ ಮೂಲಕ  ಮತದಾರನ್ನ ಸೆಳೆಯುತ್ತಿದ್ದಾರೆ. ಈ ಮಧ್ಯೆ ರಾಮನಗರಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಭೇಟಿ ವಿಚಾರಕ್ಕೆ ಸಂಬಂಧಿಸಿದಂತೆ ಹೆಚ್​ಡಿ ಕುಮಾರಸ್ವಾಮಿ ಪ್ರತಿಕ್ರಿಯಸಿ ಟಾಂಗ್ ನೀಡಿದ್ದಾರೆ.

ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ಮೋದಿ ಆದರೂ ಕರೆಸಲಿ, ಅಮೆರಿಕ ಅಧ್ಯಕ್ಷರನ್ನಾದರೂ ಕರೆಸಲಿ. ನನಗೆ ಆತಂಕ ಇಲ್ಲ, ಒಂದು ದಿನ ಭಾಷಣ ಮಾಡಿ ಹೋಗಬಹುದಲ್ವಾ? ಮಂಡ್ಯ, ತುಮಕೂರು, ಮೈಸೂರಿನಿಂದ ಜನರನ್ನು ಕರೆಸಬಹುದು. ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ ಮಾಡುತ್ತಾರೆ. ಕೇಂದ್ರ ಸಚಿವ ಅಮಿತ್ ಶಾ ರೋಡ್​ ಶೋ ಕೂಡ ಗಮನಿಸಿದ್ದೇನೆ. 4 ತಿಂಗಳಿನಿಂದ ನಡೆಸಿದ ರೋಡ್​ ಶೋ ಮುಂದೆ ಇದೇನು ಅಲ್ಲ. ನನ್ನ ಕಾರ್ಯುಕ್ರಮದ ವಿಶೇಷತೆಗಳೇ ಬೇರೆಯಾಗಿತ್ತು. ನನ್ನ ಕಾರ್ಯಕ್ರಮಕ್ಕೆ ಬಿಜೆಪಿ ಕಾರ್ಯಕ್ರಮ ಸರಿಸಾಟಿ ಅಲ್ಲ ಎಂದು ಹೇಳಿದರು.ಬಿಜೆಪಿಯವರು ಮೋದಿ ಆದರೂ ಕರೆಸಲಿ hdk

ನನ್ನ ಆರೋಗ್ಯದ ಬಗ್ಗೆ ದೇವೇಗೌಡರಿಗೆ ಸ್ವಲ್ಪ ಆತಂಕ ಇದೆ. ವೈದ್ಯರು ಮೂರು ದಿನ ವಿಶ್ರಾಂತಿ ಪಡೆಯಲು ಸೂಚಿಸಿದ್ದರು. ಆದರೆ ನಾನು ವಿಶ್ರಾಂತಿ ಪಡೆಯುವ ಸ್ಥಿತಿಯಲ್ಲಿ ಇಲ್ಲ. ಕೆ.ಆರ್ .ನಗರ, ಚಾಮರಾಜ, ವರುಣದಲ್ಲಿ ಪ್ರಚಾರ ಸಭೆ ಕರೆದಿದ್ದೇನೆ ಎಂದರು.

Key words: BJP – Modi – no match- my program -Former CM -H.D.Kumaraswamy