ಬಾಗಲಕೋಟೆ,ನವೆಂಬರ್,11,2020(www.justkannada.in): ಪುರಸಭೆಯ ಅಧ್ಯಕ್ಷ ಸ್ಥಾನದ ಚುನಾವಣೆ ವೇಳೆ ತೆರೆದಾಳ ಬಿಜೆಪಿ ಶಾಸಕ ಸಿದ್ಧು ಸವದಿ ಮಹಿಳಾ ಸದಸ್ಯೆಯನ್ನ ಎಳೆದಾಡಿ ಅಸಭ್ಯ ವರ್ತನೆ ತೋರಿರುವ ಘಟನೆ ನಡೆದಿದೆ.
ಇಂದು ಬಾಗಲಕೋಟೆ ಜಿಲ್ಲೆಯ ಮಹಲಿಂಗಪುರ ಪುರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುತ್ತಿತ್ತು. ಈ ವೇಳೆ ಅಧ್ಯಕ್ಷೆ ಆಕಾಂಕ್ಷಿ ಮಹಿಳೆ ಸವಿತಾ ಹುರಕಡ್ಲಿ ಎಂಬುವವರನ್ನ ಶಾಸಕ ಸಿದ್ದು ಸವದಿ ಎಳೆದಾಡಿರುವ ವಿಡಿಯೋ ವೈರಲ್ ಆಗಿದೆ.
ಬಿಜೆಪಿ ಸದಸ್ಯೆ ಸವಿತಾ ಹುರಕಡ್ಲಿ ಕಾಂಗ್ರೆಸ್ ಗೆ ಬೆಂಬಲಿಸಲು ಮುಂದಾದಾಗ ಶಾಸಕ ಸಿದ್ಧು ಸವದಿ ಮಹಿಳೆಯನ್ನ ನೂಕಾಡಿ ಅಸಭ್ಯ ವರ್ತನೆ ತೋರಿದ್ದಾರೆ. ಈ ವೇಳೆ ನೂಕಾಟದಲ್ಲಿ ಮಹಿಳಾ ಸದಸ್ಯೆ ಕೆಳಕ್ಕೆ ಬಿದ್ದಿದ್ದಾರೆ ಎನ್ನಲಾಗಿದೆ. ಸದ್ಯ ವಿಡಿಯೋ ವೈರಲ್ ಆಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ಸದಸ್ಯೆ ಸವಿತಾ ಹುರಕಡ್ಲಿ ಪುತ್ರಿ ಸೌಮ್ಯ ಹುರಕಡ್ಲಿ, ನಮ್ಮ ತಾಯಿಯನ್ನ ಎಳೆದಾಡಿಬಿಟ್ಟಿದ್ದಾರೆ.ಮೂವರು ಮಹಿಳಾ ಸದಸ್ಯರನ್ನ ಎಳೆದಾಡಿದ್ದಾರೆ. ಈಗ ನಮ್ಮ ತಾಯಿ ಆಸ್ಪತ್ರೆಯಲ್ಲಿದ್ದಾರೆ. ಆಸ್ಪತ್ರೆಯಲ್ಲಿದ್ದರೂ ಸೌಜನ್ಯಕ್ಕೆ ಸಿದ್ಧು ಸವದಿ ಬಂದು ಮಾತನಾಡಿಸಿಲ್ಲ. ನಮ್ಮ ತಂದೆ ತಾಯಿ ಕಳೆದ 20 ವರ್ಷದಿಂದ ರಾಜಕಾರಣ ಮಾಡುತ್ತಿದ್ದಾರೆ. ಆದರೆ ಒಂದು ಬಾರಿಯೂ ಅಧ್ಯಕ್ಷ ಸ್ಥಾನ ನೀಡಿಲ್ಲ ಎಂದಿದ್ದಾರೆ.
Key words: BJP MLA – showed- disdain – woman member – municipal-election-bagalakote