Tuesday, August 11, 2026

BDA Apartments

Home Front Page ಕಾಂಗ್ರೆಸ್ ಬಿಡುವವರ ಜತೆಗೆ ಬಿಜೆಪಿ ಬಿಡುವವರ ಲೀಸ್ಟ್ ಕೂಡ ನನ್ನ ಬಳಿ ಇದೆ- ಶಾಸಕ ಯತ್ನಾಳ್.

ಕಾಂಗ್ರೆಸ್ ಬಿಡುವವರ ಜತೆಗೆ ಬಿಜೆಪಿ ಬಿಡುವವರ ಲೀಸ್ಟ್ ಕೂಡ ನನ್ನ ಬಳಿ ಇದೆ- ಶಾಸಕ ಯತ್ನಾಳ್.

ವಿಜಯಪುರ,ಜನವರಿ,31,2022(www.justkannada.in):  ಕಾಂಗ್ರೆಸ್  ಬಿಡುವವರ ಲೀಸ್ಟ್ ನನ್ನ ಬಳಿ ಇದೆ. ಜತೆಗೆ ಬಿಜೆಪಿ ಬಿಡುವವರ ಲೀಸ್ಟ್ ಸಹ ನನ್ನ ಬಳಿ ಇದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ನೀಡಿದ್ದಾರೆ.

ವಿಜಯಪುರದಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಚುನಾವಣೆ ಸಮಯದಲ್ಲಿ ಜಾದೂ ನಡೆಯಲಿದೆ. ಎಲೆಕ್ಷನ್ ಗೆ 6 ತಿಂಗಳಿದ್ದಾಗ ಸಚಿವ ಸಂಪುಟ ಪುನರಚನೆ ಮಾಡಿದರೇ ಪ್ರಯೋಜನವಿಲ್ಲ. ಯಾರೂ ಕೂಡ ಮಂತ್ರಿಯಾಗಲು ಒಪ್ಪುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಾಳೆ ಸಿಎಂ ದೆಹಲಿಗೆ ಹೊರಟಿದ್ದಾರೆ. ಸಂಪುಟ ಪುನರಚನೆ ಬಗ್ಗೆ  ಚರ್ಚೆ ಮಾಡಬಹುದು ಎಂದು ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದರು.

Key words: BJP-MLA-Basanagowda patil yatnal