ಜೆಬಿ ಕಾವಲ್ ಅರಣ್ಯವನ್ನು ಉದ್ಯಾನವನ್ನಾಗಿ ಪರಿವರ್ತಿಸುವ ಯೋಜನೆಯನ್ನು ವಿರೋಧಿಸುವವರೊಂದಿಗೆ ಧ್ವನಿಗೂಡಿಸಿದ ಬಿಜೆಪಿ ನಾಯಕ

ಬೆಂಗಳೂರು, ಅಕ್ಟೋಬರ್ 26, 2021 (www.justkannada.in): ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಮಾಜಿ ಕಾರ್ಪೊರೇಟರ್ ಹಾಗೂ ಬಿಜೆಪಿಯ ನಾಯಕ ಎನ್.ಆರ್. ರಮೇಶ್ ಅವರು, ಬೆಂಗಳೂರಿನ ಜೆ.ಬಿ. ಕಾವಲ್ ಮೀಸಲು ಅರಣ್ಯ ಪ್ರದೇಶವನ್ನು ಉದ್ಯಾನವನ್ನಾಗಿ ಪರಿವರ್ತಿಸುವ ಸರ್ಕಾರದ ಪ್ರಸ್ತಾವನೆಯೊಂದನ್ನು ವಿರೋಧಿಸುತ್ತಿರುವ ನಾಗರಿಕರೊಂದಿಗೆ ಧ್ವನಿಗೂಡಿಸಿದ್ದಾರೆ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಬರೆದಿರುವ ಪತ್ರವೊಂದರಲ್ಲಿ ರಮೇಶ್ ಅವರು, ಜಿಂಕೆ ಹಾಗೂ ನರಿಗಳಿಂದ ಹಿಡಿದು ವನ್ಯಜೀವಿಗಳು ವಾಸಿಸುತ್ತಿರುವ ಈ ಅರಣ್ಯವನ್ನು ನಾಶಪಡಿಸುವುದರಿಂದ ಬೆಂಗಳೂರು ನಗರಕ್ಕೆ ದೊಡ್ಡ ಮಟ್ಟದಲ್ಲಿ ಹಾನಿಯಾಗುತ್ತದೆ ಎಂದು ತಿಳಿಸಿದ್ದಾರೆ

ಈ ನಡುವೆ, ಅಕ್ಟೋಬರ್ ೨೪ ರಂದು, ಪ್ರಾಜೆಕ್ಟ್ ವೃಕ್ಷ ಎಂಬ ಹೆಸರಿನ ಎನ್‌ಜಿಒದ ಸ್ಥಾಪಕ ವಿಜಯ್ ನಿಶಾಂತ್ ಅವರು ಮಾನ್ಯ ಮುಖ್ಯಮಂತ್ರಿಗಳಿಗೆ ಈ ಯೋಜನೆಯನ್ನು ಕೈಬಿಡುವಂತೆ ಕೋರಿದ್ದಾರೆ. “ಇದು ಉತ್ತರ ಬೆಂಗಳೂರು ಭಾಗದಲ್ಲಿ ಉಳಿದುಕೊಂಡಿರುವ ಕೊನೆಯ ಹಸಿರು ತಾಣವಾಗಿದೆ. ಈಗಿರುವ ಜೀವವೈಧ್ಯತೆಯನ್ನು ಬದಲಾಯಿಸಿ, ಕೃತಕ ಅರಣ್ಯವನ್ನು ಸೃಷ್ಟಿಸುವ ಸಲುವಾಗಿ ಈ ನೈಸರ್ಗಿಕ ಅರಣ್ಯವನ್ನು ನಾಶಪಡಿಸಲಾಗುವುದಿಲ್ಲ. ಇದು ಟ್ರೀ ಪಾರ್ಕ್ಗಳನ್ನು ಸ್ಥಾಪಿಸಲು, ಹಾಲಿ ಇರುವಂತಹ ಅರಣ್ಯ ನಿಯಮಗಳು ಹಾಗೂ ಮಾರ್ಗಸೂಚಿಗಳ ಉಲ್ಲಂಘನೆಯಾಗುತ್ತದೆ. ಈ ನೈಸರ್ಗಿಕ ಅರಣ್ಯ ಒಂದು ಒಣ ಅರಣ್ಯವಾಗಿದ್ದು, ತನ್ನದೇ ಆದ ವಿಶೇಷ ಪ್ರಾಣಿ ಹಾಗೂ ಸಸ್ಯಸಂಕುಲವನ್ನು ಹೊಂದಿದೆ,” ಎಂದರು. ಮುಂದುವರೆದು ನಿಶಾಂತ್ ಅವರು, “ಸರ್ಕಾರ ಈ ರೀತಿ ಅಧಿಸೂಚಿತ ಮೀಸಲು ಅರಣ್ಯ ಪ್ರದೇಶವನ್ನು ನಾಶಪಡಿಸುವುದರ ಬದಲು ಮಾವಳ್ಳಿಪುರದಂತಹ ವ್ಯರ್ಥ ಭೂಮಿಯನ್ನು ಒಂದು ಟ್ರೀ ಪಾರ್ಕ್ ಅನ್ನಾಗಿ ಅಭಿವೃದ್ಧಿಸುವ ಕುರಿತು ಆಲೋಚಿಸಬಹುದು,” ಎಂದಿದ್ದಾರೆ.
ಈ ಮೀಸಲು ಅರಣ್ಯ ಪ್ರದೇಶದ ಒಂದು ಭಾಗವನ್ನು ಈಗಾಗಲೇ ಟ್ರೀ ಪಾರ್ಕ್ ಅನ್ನಾಗಿ ಪರಿವರ್ತಿಸಲಾಗಿದ್ದು ಜನರಿಗೆ ಪ್ರವೇಶವನ್ನೂ ಕಲ್ಪಿಸಲಾಗಿದೆ. ಒಂದು ಮೀಸಲು ಅರಣ್ಯ ಪ್ರದೇಶವನ್ನು ನಾಶಪಡಿಸಿ ಕೃತಕ ಅರಣ್ಯವನ್ನು ಸೃಷ್ಟಿಸುವ ಹಿಂದಿರುವ ತರ್ಕವಾದರೂ ಏನು ಎನ್ನುತ್ತಾರೆ ನಿಶಾಂತ್.

ಜರಕಬಂಡೆಕಾವಲ್ ಕೆರೆ ಕಣ್ಮರೆಯಾದ ಸುದ್ದಿಗಳನ್ನು ಆಧರಿಸಿ ಲೋಕಾಯುಕ್ತ ಸೋಮವಾರದಂದು ಪ್ರಕರಣವನ್ನು ಕೈಗೆತ್ತಿಕೊಂಡಿದೆ. ಸುಮಾರು ೫.೮೯ ಎಕರೆ ವ್ಯಾಪ್ತಿಯಷ್ಟಿರುವ ಈ ಕೆರೆ ಅರಣ್ಯದಿಂದ ಕಣ್ಮರೆಯಾಗಿರುವುದಷ್ಟೇ ಅಲ್ಲದೆ, ಕಂದಾಯ ಇಲಾಖೆಯ ಕಡತಗಳಿಂದಲೂ ಕಣ್ಮರೆಗೊಳಿಸಲಾಗಿದೆ. ಈ ಕೆರೆಯನ್ನು ಯಾವುದೋ ಖಾಸಗಿ ಸಂಸ್ಥೆಯೊAದಕ್ಕೆ ನೀಡಿರುವ ಬಗ್ಗೆ ಆರೋಪಗಳೂ ಕೇಳಿ ಬಂದಿವೆ.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಬಿಬಿಎಂಪಿ, ಬೆಂಗಳೂರು ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ (ಬಿಡಬ್ಲೂö್ಯಎಸ್‌ಎಸ್‌ಬಿ) ಹಾಗೂ ಯಲಹಂಕದ ತಹಸೀಲ್ದಾರ್ ಅವರು ಮುಂದಿನ ಆರು ವಾರಗಳೊಳಗೆ ಈ ವಿಷಯಕ್ಕೆ ಸಂಬAಧಪಟ್ಟAತೆ ಅವರ ವರದಿಗಳನ್ನು ಸಲ್ಲಿಸಲಿದ್ದು, ಲೋಕಾಯುಕ್ತ ಡಿಸೆಂಬರ್ ೬ರಂದು ವಿಚಾರಣೆ ನಡೆಸಲಿದೆ.

ಸುದ್ದಿ ಮೂಲ: ಇಂಡಿಯನ್ ಎಕ್ಸ್ಪ್ರೆಸ್

key words: BJP leader- voiced -opposition – plans – convert -JB Caval forest- into- park