ಚುನಾವಣೆ ಗೆಲ್ಲಲು ಬಿಜೆಪಿ-ಜೆಡಿಎಸ್ ಹೊಂದಾಣಿಕೆ ಅನಿವಾರ್ಯ- ಮಾಜಿ ಸಚಿವ ಸಿ.ಪಿ ಯೋಗೇಶ್ವರ್.

ರಾಮನಗರ,ಸೆಪ್ಟಂಬರ್,8,2023(www.justkannada.in): ಚುನಾವಣೆ ಗೆಲ್ಲಲು ಬಿಜೆಪಿ-ಜೆಡಿಎಸ್ ಹೊಂದಾಣಿಕೆ ಅನಿವಾರ್ಯ ಎಂದು ಮಾಜಿ ಸಚಿವ ಸಿ.ಪಿ ಯೋಗೇಶ್ವರ್ ತಿಳಿಸಿದ್ದಾರೆ.

ರಾಮನಗರದಲ್ಲಿ ಇಂದು ಮಾತನಾಡಿದ ಸಿ.ಪಿ ಯೋಗೇಶ್ವರ್, ಎನ್ ಡಿಎ ಮೈತ್ರಿಕೂಟಕ್ಕೆ ಜೆಡಿಎಸ್ ಸೇರಿಕೊಳ್ಳುತ್ತದೆ. ನಾವು ಕಾಂಗ್ರೆಸ್ ಬಗ್ಗು ಬಡಿಯುತ್ತೇವೆ. ಚುನಾವಣೆ ಗೆಲ್ಲಲು ಹೊಂದಾಣಿಕೆ ಅನಿವಾರ್ಯ ಎಂದರು.

ಬಿಜೆಪಿ ಜೆಡಿಎಸ್ ಮೈತ್ರಿಯಿಂದ ಹೆಚ್ಚು ಸ್ಥಾನ ಗೆಲ್ಲಬಹುದು. ಡಿಕೆ ಸುರೇಶ್ ಸೋಲಿಸುವುದೇ ನಮ್ಮ ಉದ್ದೇಶ.   ಮತ್ತೆ ಮೋದಿ ಅವರನ್ನ ಪ್ರಧಾನಿ ಮಾಡುವುದೇ ನಮ್ಮ ಗುರಿ.  ಜೆಡಿಎಸ್ ಬಿಜೆಪಿ ಮೈತ್ರಿ ಅನಿವಾರ್ಯ ಎಂದು ತಿಳಿಸಿದರು.

Key words: BJP-JDS -alliance – essential – win- elections – Former minister -CP Yogeshwar.