Sunday, August 23, 2026

BDA Apartments

Home Front Page ವೈಯಕ್ತಿಕ ಟೀಕೆ ಮಾಡುವುದೇ ಬಿಜೆಪಿಯವರ ಹವ್ಯಾಸ- ಶಾಸಕ ಪ್ರಿಯಾಂಕ್ ಖರ್ಗೆ ವಾಗ್ದಾಳಿ.

ವೈಯಕ್ತಿಕ ಟೀಕೆ ಮಾಡುವುದೇ ಬಿಜೆಪಿಯವರ ಹವ್ಯಾಸ- ಶಾಸಕ ಪ್ರಿಯಾಂಕ್ ಖರ್ಗೆ ವಾಗ್ದಾಳಿ.

ಕಲ್ಬುರ್ಗಿ,ಸೆಪ್ಟಂಬರ್,12,2022(www.justkannada.in):  ಮಾಜಿ ಸಿಎಂ ಸಿದ್ಧರಾಮಯ್ಯ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ಧ ಮಾಜಿ ಸಚಿವ ಸಿ.ಟಿ ರವಿ ವಿರುದ್ಧ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಇಂದು ಮಾಧ್ಯಮಗಳ ಜತೆ ಮಾತನಾಡಿದ ಶಾಸಕ ಪ್ರಿಯಾಂಕ್ ಖರ್ಗೆ, ಬಿಜೆಪಿಗೆ ವಿಷಯದ ಮೇಲೆ ಮಾತನಾಡಲು ಬರಲ್ಲ.  ಬಿಜೆಪಿಯವರು  ವೈಯಕ್ತಿಕ ಟೀಕೆ ಮಾಡುವುದನ್ನೇ ಹವ್ಯಾಸ ಮಾಡಿಕೊಂಡಿದ್ದಾರೆ.  ಇವರಿಗೆ ಅಂಕಿ ಅಂಶ ಕೋಡುವುದಕ್ಕೆ ಆಗೋದಲ್ಲ, ವೈಯಕ್ತಿಕ ಟೀಕೆ,  ಡಿಕೆ ಶಿ ಹಾಗೂ  ಸಿದ್ದರಾಂಯ್ಯ ಬಗ್ಗೆ ಟೀಕೆ ಮಾಡುವುದು ಹವ್ಯಾಸವಾಗಿಬಿಟ್ಟಿದೆ.

ಬಿಜೆಪಿಯವರು ತುಂಬಾ ದೊಡ್ಡ ದೊಡ್ಡ ಮಾತುಗಳನ್ನಾಡುತ್ತಾರೆ.  ಸಂಸ್ಕೃತಿ ರಕ್ಷಕರು ಅಂತಾರೆ.  ಆದರೆ ಮಾತನಾಡೋದು ಹೀಗೆ.  ಮಾಡೋದೆಲ್ಲಾ ಅನಾಚಾರ ಮನೆ ಮುಂದೆ ಬೃಂದಾವನ ಎಂಬಂತೆ ಬಿಜೆಪಿಯವರ ಸ್ಥಿತಿ ಎಂದು ಪ್ರಿಯಾಂಕ್ ಖರ್ಗೆ ಕಿಡಿಕಾರಿದರು.

Key words: BJP- hobby – personal- criticism- MLA- Priyank Kharge -attack