Sunday, August 23, 2026

BDA Apartments

Home Front Page ಬಿಜೆಪಿ ಸರ್ಕಾರ ಹಣದ, ಜಾಹೀರಾತುಗಳ ಸರ್ಕಾರ: ಮಾಜಿ ಸಿಎಂ ವೀರಪ್ಪ ಮೊಯ್ಲಿ ವಾಗ್ದಾಳಿ.

ಬಿಜೆಪಿ ಸರ್ಕಾರ ಹಣದ, ಜಾಹೀರಾತುಗಳ ಸರ್ಕಾರ: ಮಾಜಿ ಸಿಎಂ ವೀರಪ್ಪ ಮೊಯ್ಲಿ ವಾಗ್ದಾಳಿ.

ಮೈಸೂರು,ಫೆಬ್ರವರಿ,15,2023(www.justkannada.in): ಬಿಜೆಪಿ ಸರ್ಕಾರ ಹಣದ, ಜಾಹೀರಾತುಗಳ ಸರ್ಕಾರ. ರಾಜ್ಯ ಬಿಜೆಪಿ ಸರ್ಕಾರ ಜಾಹೀರಾತುಗಳ ಮೂಲಕವೇ ಉಸಿರಾಡುತ್ತಿದೆ. ಈಗಿನ ಸಿಎಂ ಒಬ್ಬ ನಿಷ್ಪ್ರಯೋಜಕ ಏನೂ ಕೆಲಸ ಮಾಡುತ್ತಿಲ್ಲ. ಅಭಿವೃದ್ಧಿಯಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಮಾಜಿ ಸಿಎಂ ವೀರಪ್ಪ ಮೊಯ್ಲಿ ವಾಗ್ದಾಳಿ ನಡೆಸಿದರು.

ಮೈಸೂರಿನಪತ್ರಕರ್ತರ ಭವನದಲ್ಲಿ ಪತ್ರಕರ್ತರೊಂದಿಗೆ ಸಂವಾದ ಕಾರ್ಯಕ್ರಮ ಮಾತನಾಡಿದ ಮಾಜಿ ಸಿಎಂ ವೀರಪ್ಪ ಮೊಯ್ಲಿ,  ಮೋದಿ ರಾಜ್ಯಕ್ಕೆ ಬಂದು ಸಿದ್ದರಾಮಯ್ಯನವರ ಸರ್ಕಾರ 10% ಸರ್ಕಾರ ಅಂದರು. ಅಂದು ಜನರಿಗೆ ಇದು ಮನಸ್ಸಿಗೆ ತಟ್ಟಲಿಲ್ಲ. ಆದರೆ ಈಗ ಬಿಜೆಪಿ 40% ಸರ್ಕಾರ ಎಂದು ನಾವು ಆರೋಪ ಮಾಡಿದ್ದೀವಿ. ಆದರೆ ಇಂದು ಈ ವಿಚಾರ ಜನರ ಮನಸ್ಸಿಗೆ ತಟ್ಟಿದೆ. ಜನರಿಗೆ ಇದು 40% ಸರ್ಕಾರ ಎಂದು ಗೊತ್ತಾಗಿದೆ. ಇದರಲ್ಲೇ ಗೊತ್ತಾಗುತ್ತೆ ಯಾರು ತಪ್ಪು ಮಾಡಿದ್ದಾರೆಂದು. ಇಂದು ಶ್ರೀಮಂತರು ಮತ್ತಷ್ಟು ಹೆಚ್ಚು ಶ್ರೀಮಂತರಾಗುತ್ತಿದ್ದಾರೆ.ಇಡೀ ಲೋಕಾಯುಕ್ತವೇ ಭ್ರಷ್ಟಾರಾಗಿದ್ದರು. ಹಾಗಾಗಿಯೇ ಎಸಿಬಿಯನ್ನ ಜಾರಿಗೆ ತಂದರು ಎಂದರು.

ನಮ್ಮದು ಅಭಿವೃದ್ಧಿ, ಸಾಮಾಜಿಕ ನ್ಯಾಯ ಮತ್ತು  ಶುದ್ಧ ಆಡಳಿತವೇ ನಮ್ಮ ಮುಖ್ಯ ವಿಷಯ. ಸಿಎಂ ಸ್ಥಾನದಲ್ಲಿ ಇದ್ದು ಜೈಲಿಗೆ ಹೋದ ಯಡಿಯೂರಪ್ಪ ರಾಜ್ಯಕ್ಕೆ ಒಂದು ಕಪ್ಪು ಚುಕ್ಕೆ. ಈಗಿನ ಸಿಎಂ ಒಬ್ಬ ನಿಷ್ಪ್ರಯೋಜಕ ಏನೂ ಕೆಲಸ ಮಾಡುತ್ತಿಲ್ಲ.ಅಭಿವೃದ್ಧಿಯಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಕಿಡಿಕಾರಿದರು.

ಅಭ್ಯರ್ಥಿಗಳು ಕಾಂಗ್ರೆಸ್  ಟಿಕೆಟ್‌ಗಾಗಿ ಅರ್ಜಿ ಸಲ್ಲಿಸುವಾಗ 2 ಲಕ್ಷ ರೂ. ನೀಡಿರುವ ವಿಚಾರ ಕುರಿತು ಪ್ರತಿಕ್ರಿಯಿಸಿದ ವೀರಪ್ಪ ಮೊಯ್ಲಿ, ನಮ್ಮದು ಸೈದಾಂತಿಕವಾದ ಪಕ್ಷ. ನಮ್ಮ‌ ಕಾಲದಲ್ಲಿ ನಾವೆಂದು ಹಣ ಯಾರಿಂದಲು ಪಡೆದುಕೊಂಡಿಲ್ಲ. ಆದರೆ ಇಂದು ಕಾಲ ಬದಲಾಗಿದೆ ಅವರು ಪಡೆದುಕೊಂಡಿದ್ದಾರೆ? ಆದರೆ ನಮ್ಮ ಕಾಲದಲ್ಲಿ ಈ ಪದ್ಧತಿ ಇರಲಿಲ್ಲ ಎಂದು ತಿಳಿಸಿದರು.

ನಾನೇ ಮುಂದಿನ ಮುಖ್ಯಮಂತ್ರಿ ಎಂಬ ನಾಯಕರ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ವೀರಪ್ಪ ಮೊಯ್ಲಿ, ಅದು ಅವರವರ ವೈಯಕ್ತಿಕ ಆಸೆ, ಹೇಳಿಕೆ ವ್ಯಕ್ತಪಡಿಸುತ್ತಾರೆ. ಇದರಲ್ಲಿ ಯಾವುದೇ ತಪ್ಪಿಲ್ಲ, ನಮ್ಮ ಪಕ್ಷಕ್ಕೆ ಸಮಸ್ಯೆಯು ಇಲ್ಲ. ಎಲ್ಲರು ಅವರವರ ಅಭಿಪ್ರಾಯವನ್ನ ಹೇಳುವ ಹಕ್ಕು ಇದೆ. ಆ ಹಕ್ಕನ್ನ ನಾವು ಹತ್ತಿಕ್ಕಲು ಸಾಧ್ಯವಿಲ್ಲ. ಇದು ನಮ್ಮ ಪಕ್ಷಕ್ಕೆ ಗೊಂದಲ ಆಗೋದಿಲ್ಲ. ನಮ್ಮ ಪರವಾಗಿ ಜನರು ಇದ್ದಾರೆ ಅನೇಕ ಯಾತ್ರೆ ಮಾಡಿದ್ದೇವೆ. ಈ ಯಾತ್ರೆಯಲ್ಲಿ ಕಾಂಗ್ರೆಸ್ ಪರವಾದ ಅಲೆ ಇದೆ ಎಂಬುದು ಗೊತ್ತಾಗಿದೆ. ಜನರು ನಮ್ಮ ಪರವಾಗಿ ಒಲವು ತೋರಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಈ ಬಾರಿ ಕಾಂಗ್ರೆಸ್ ಗೆ ಸ್ಪಷ್ಟ ಬಹುಮತ ಬರುತ್ತೆ. ಜೆಡಿಎಸ್ ಜೊತೆ ಕೈ ಜೋಡಿಸುವ ಮಾತೆ ಇಲ್ಲ. ಅವರ ಜೊತೆ ಕೈ ಜೋಡಿಸಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಒಂದು ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಯಿತು. ಇಂಥಾ ಪರಿಸ್ಥಿತಿ ಯಾವಾಗಲೂ ಆಗಿರಲಿಲ್ಲ. ಅವರಿಂದ ನಾವು ಸಾಕಷ್ಟು ಬುದ್ದಿ ಕಲಿತಿದ್ದೇವೆ ಎಂದು ನುಡಿದರು.

ನಾನು ನನ್ನ ಮಗ ಚುನಾವಣೆಗೆ ಸ್ಪರ್ಧೆ ಮಾಡಲ್ಲ. ಈ ಚುನಾವಣೆಯಲ್ಲಿ ನಮ್ಮ ಕುಟುಂಬದಿಂದ ಸ್ಪರ್ಧೆ ಇಲ್ಲ. ಯಾರಿಗಾದರೂ ಗೆಲ್ಲುವ ಸಾಮರ್ಥ್ಯ ಇದ್ದರೆ ಟಿಕೆಟ್ ಕೊಡ್ತಿವಿ. ಇದು ವಿಶೇಷ ವ್ಯಕ್ತಿಗಳಿಗೆ ಅನ್ವಯಿಸುವ ವಿಚಾರದಲ್ಲಿ ಗಣನೆಗೆ ತೆಗೆದುಕೊಳ್ಳುತ್ತೇವೆ ಎಂದು ವೀರಪ್ಪ ಮೋಯ್ಲಿ ಸ್ಪಷ್ಟನೆ ನೀಡಿದರು.

ನಾನು ಚುನಾವಣೆಯನ್ನ ಭ್ರಷ್ಟಾಚಾರ ಇಲ್ಲದೆ ಗೆದ್ದಿದ್ದೇನೆ. ಹಣ ಕೊಡದೆ 6 ಬಾರಿ ಎಂಎಲ್‌ಎ ಆಗಿದ್ದೇನೆ. ಹಣದ ಪ್ರಭಾವ ಬಿಟ್ಟು ವರ್ಚಸ್ಸಿನ ಮೇಲೆ‌ ಚುನಾವಣೆ ಗೆಲ್ಲಬೇಕು. ಹಣ ಕೊಟ್ಟು ಗೆದ್ದವರು, ಹಣದ ನಿರೀಕ್ಷೆ ಇಟ್ಟುಕೊಂಡಿರುತ್ತಾರೆ. ಯೂತ್ಸ್ ಬಂದ್ರೆ ಗೆಲ್ಲುವ ಅಭ್ಯರ್ಥಿ ಇದ್ರೆ ಟಿಕೆಟ್ ಕೊಡ್ತಿವಿ. ಹಾಗಂತ ಯೂತ್ಸ್ ನನಗೆ ಟಿಕೆಟ್ ಕೊಡಿ ಅಂದ್ರೆ ಆಗಲ್ಲ. ಮೊದಲು ಅವರು ಗೆಲ್ಲುವ ಅಭ್ಯರ್ಥಿ ಆಗಿರಬೇಕು ಎಂದು ಮಾಜಿ ಸಿಎಂ ವೀರಪ್ಪ ಮೊಯ್ಲಿ ಹೇಳಿದರು.

Key words: BJP- government – money-ads- Former CM -Veerappa Moily -mysore