Wednesday, August 12, 2026

BDA Apartments

Home Front Page ಡಿ.ಕೆ ಶಿವಕುಮಾರ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಿದ ಬಿಜೆಪಿ ನಿಯೋಗ.

ಡಿ.ಕೆ ಶಿವಕುಮಾರ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಿದ ಬಿಜೆಪಿ ನಿಯೋಗ.

ಬೆಂಗಳೂರು,ಏಪ್ರಿಲ್,4,2023(www.justkannada.in): ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಪಕ್ಷದ ತೆಜೋವಧೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್  ವಿರುದ್ದ ರಾಜ್ಯ ಬಿಜೆಪಿ ನಿಯೋಗ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.

ಬಿಜೆಪಿ ಎಂಎಲ್ ಸಿ ಛಲವಾದಿ ನಾರಾಯಣಸ್ವಾಮಿ ನೇತೃತ್ವದಲ್ಲಿ ಡಿಕೆ ಶಿವಕುಮಾರ್  ವಿರುದ್ದ ಎರಡು ದೂರನ್ನ ಬಿಜೆಪಿ ನಿಯೋಗ ದಾಖಲಿಸಿದೆ ಎನ್ನಲಾಗಿದೆ.

ದೂರು ಸಲ್ಲಿಸಿದ ಬಳಿಕ ಮಾತನಾಡಿದ ಛಲವಾದಿ ನಾರಾಯಣಸ್ವಾಮಿ,  ಕನಕಪುರದಲ್ಲಿ ಬಿಜೆಪಿ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಹಸುಗಳನ್ನ ಸಾಗಿಸುತ್ತಿದ್ದಾಗ ಕೆಲ ಸಂಘಟನೆ ತಡೆದಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿ ಬಿಜೆಜೆ ವಿರುದ್ದ ಸುಳ್ಳು ಆರೋಪ  ಮಾಡಿ ಕೆಟ್ಟದಾಗಿ ಬಿಂಬಿಸಿದ್ದಾರೆ. ಚುನಾವಣೆ ಸಂದರ್ಭದಲ್ಲಿ ನಮ್ಮ ಪಕ್ಷದ ತೇಜೋವಧೆ ಮಾಡತ್ತಿದ್ದಾರೆ. ಕೂಡಲೇ ಡಿಕೆ ಶಿವಕುಮಾರ್ ವಿರುದ್ದ ಕ್ರಮ ಕೈಗೊಳ್ಳ್ಳಬೇಕು ಎಂದು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇವೆ. ಕ್ರಮ ಕೈಗೊಳ್ಳುವುದಾಗಿ ಚುನಾವಣಾ ಆಯೋಗ ಭರವಸೆ ನೀಡಿದೆ ಎಂದು ತಿಳಿಸಿದರು.

Key words: BJP -delegation -filed -complaint –against-DK Shivakumar – Election Commission.