Friday, August 14, 2026

BDA Apartments

Home Front Page ಬಿಜೆಪಿ ಮುಖಂಡ ಸಿ.ಪಿ ಯೋಗೇಶ್ವರ್ ಪುತ್ರಿ ಕಾಂಗ್ರೆಸ್ ಸೇರಲು ನಿರ್ಧಾರ.

ಬಿಜೆಪಿ ಮುಖಂಡ ಸಿ.ಪಿ ಯೋಗೇಶ್ವರ್ ಪುತ್ರಿ ಕಾಂಗ್ರೆಸ್ ಸೇರಲು ನಿರ್ಧಾರ.

ಬೆಂಗಳೂರು,ಮಾರ್ಚ್, 30,2024 (www.justkannada.in): ಬಿಜೆಪಿ ನಾಯಕ ಸಿ.ಪಿ ಯೋಗೇಶ್ವರ್ ಪುತ್ರಿ ನಿಶಾ ಕಾಂಗ್ರೆಸ್ ಸೇರ್ಪಡೆಯಾಗಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಈ ಕುರಿತು ಮಾತನಾಡಿರುವ ಯೋಗೇಶ್ವರ್ ಪುತ್ರಿ ನಿಶಾ, ಕಾಂಗ್ರೆಸ್ ಸೇರ್ಪಡೆಗೆ ಸಿದ್ದಳಿದ್ದೇನೆ. ಇನ್ನು ದಿನಾಂಕ ಫಿಕ್ಸ್ ಆಗಿಲ್ಲ. ನಾನು ಕಾಂಗ್ರೆಸ್ ಸೇರಲು ನನ್ನ ತಂದೆ ಸಹಮತ ಇದೆ. ಕಾಂಗ್ರೆಸ್ ಸೇರುವ ಸ್ವಾತಂತ್ರ್ಯ ನನಗೆ ಕೊಟ್ಟಿದ್ದಾರೆ ಎಂದಿದ್ದಾರೆ.

ಯಾರಿಗಾದ್ರೂ ಲಾಭ ಆಗಾದಾದ್ರೇ ಆಗಲಿ,  ನನಗೆ ಟಿಕೆಟ್ ಸಿಕ್ಕರೆ ಕಾಂಗ್ರೆಸ್ ನಿಂದ ಸೇವೆ ಮಾಡುತ್ತೇನೆ.  ಚನ್ನಪಟ್ಟಣ ಅಭಿವೃದ್ದಿಗಾಗಿ ಕಾಂಗ್ರೆಸ್ ಸೇರುತ್ತಿದ್ದೇನೆ  ಎಂದು ನಿಶಾ ತಿಳಿಸಿದ್ದಾರೆ.

ಹಲವು ಬಾರಿ ಡಿಸಿಎಂ ಡಿಕೆ ಶಿವಕುಮಾರ್‌ ಹಾಗೂ ಸಂಸದ ಡಿಕೆ ಸುರೇಶ್‌ ಅವರನ್ನು ಭೇಟಿ ಮಾಡಿದ್ದ ನಿಶಾ ಯೋಗೇಶ್ವರ್‌ ಕಾಂಗ್ರೆಸ್‌ ಸೇರುವ ಬಗ್ಗೆ ಒಲವು ವ್ಯಕ್ತಪಡಿಸಿದ್ದರು.

Key words: BJP, CP Yogeshwar, daughter, Congress