ಜೆಡಿಎಸ್ ಜೊತೆ ಮೈತ್ರಿ: ವರಿಷ್ಠರು ಮಾಡುವ ನಿರ್ಧಾರಕ್ಕೆ ಬದ್ದ- ಬಿವೈ ವಿಜಯೇಂದ್ರ

ಬೆಂಗಳೂರು,ಡಿಸೆಂಬರ್,27,2025 (www.justkannada.in): ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಕಷ್ಟ ಎಂದು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ನೀಡಿರುವ ಹೇಳಿಕೆ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಪ್ರತಿಕ್ರಿಯಿಸಿದ್ದಾರೆ.

ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಮೈತ್ರಿ ಕುರಿತು ನಮ್ಮ ವರಿಷ್ಠರು, ಹೆಚ್ ಡಿದೇವೇಗೌಡರು, ಹೆಚ್ ಡಿ ಕುಮಾರಸ್ವಾಮಿ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತಾರೆ.  ವರಿಷ್ಠರು ಮಾಡುವ ತೀರ್ಮಾನಕ್ಕೆ ಬದ್ದ ಎಂದು ಬಿವೈ ವಿಜಯೇಂದ್ರ ತಿಳಿಸಿದ್ದಾರೆ.

ಈ ಕುರಿತು ಮಾತನಾಡಿರುವ ಬಿವೈ ವಿಜಯೇಂದ್ರ,  ದೇವೇಗೌಡರ ಬಗ್ಗೆ ನನಗೆ ಅಪಾರ ಗೌರವವಿದೆ.  ನನ್ನ ಬಗ್ಗೆಯೂ ದೇವೇಗೌಡರು ಒಳ್ಳೇಯ ಮಾತನಾಡಿದ್ದಾರೆ. ಮೊನ್ನೆ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಬಿಜೆಪಿ ಗೆದ್ದಿದೆ.  ಕಾರ್ಯಕರ್ತರಿಗೆ ವಿಶ್ವಾಸ ಬರುವಂತೆ  ಮಾಡುವುದು ನಮ್ಮ ಕೆಲಸ. ಜೆಡಿಎಸ್ ಜೊತೆ ಮೈತ್ರಿ ಮೋದಿಯವರ ಆಪೇಕ್ಷೆ.  ಕಾರ್ಯಕರ್ತರಿಗೆ ಏನು ಸಂದೇಶ ಕೊಡಬೇಕಿತ್ತೋ ಆದನ್ನ ಕೊಟ್ಟೆ ವರಿಷ್ಠರು ಮಾಡುವ ತೀರ್ಮಾಣಕ್ಕೆ ನಾವು ಬದ್ದ ಎಂದರು.

ಹೆಚ್ ಡಿ ದೇವೇಗೌಡರ ಹೇಳಿಕೆ ತಪ್ಪಾಗಿ ಅರ್ಥೈಸುವ ಪ್ರಶ್ನೆ ಇಲ್ಲ.  ಬಿಎಸ್ ವೈಗೆ ಎಷ್ಟು ಗೌರವ ಕೊಡುತ್ತೇವೋ ಅಷ್ಟೇ ಗೌರವವನ್ನು ಹೆಚ್ ಡಿ ದೇವೇಗೌಡರಿಗೆ ಕೊಡುತ್ತೇವೆ.  ಅಂತಿಮವಾಗಿ ಹೈಕಮಾಂಡ್ ಹೆಚ್ ಡಿಡಿ, ಹೆಚ್ ಡಿಕೆ ಚರ್ಚಿಸಿ ತೀರ್ಮಾನಿಸುತ್ತಾರೆ. ಬಿವೈ ವಿಜಯೇಂದ್ರ ತಿಳಿಸಿದರು.

Key words: Alliance, with, JDS, decision, BJP, BY Vijayendra