ಲಾರಿ ಡಿಕ್ಕಿಯಾಗಿ ಬೈಕ್ ನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವು

ಬೆಂಗಳೂರು,ಜೂನ್,16,2025 (www.justkannada.in):  ವೇಗವಾಗಿ ಬಂದು ಲಾರಿ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಯುವಕ, ಯುವತಿ ಇಬ್ಬರು ಸ್ಥಳದಲ್ಲೇ  ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ನೆಲಮಂಗಲದಲ್ಲಿ ನಡೆದಿದೆ.

ನೆಲಮಂಗಲದ ಕುಣಿಗಲ್ ಬೈಪಾಸ್ ಬಳಿ ಈ ಅಪಘಾತ ಸಂಭವಿಸಿದೆ.  ಮೃತರನ್ನು ಬೆಂಗಳೂರಿನ ಶ್ರೀರಾಂಪುರದ ಪ್ರಜ್ವಲ್ (21) ಹಾಗೂ ಸಹನಾ (31) ಮೃತ ಪಟ್ಟವರು. ಕುಣಿಗಲ್ ನಿಂದ ಬೆಂಗಳೂರಿಗೆ ಬರುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.

ಪ್ರಜ್ವಲ್ ಮತ್ತು ಸಹನಾ ಡ್ಯಾನ್ಸರ್ ಆಗಿದ್ದು ಇವೆಂಟ್ ಗಳಲ್ಲಿ ಡ್ಯಾನ್ಸ್ ಮಾಡುತ್ತಿದ್ದರು ಎನ್ನಲಾಗಿಎ. ಸದ್ಯ ಪೊಲೀಸರು ಲಾರಿ ಜಪ್ತಿ ಮಾಡಿ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ.vtu

Key words: bike, lorry, Accident, Two, died