Saturday, August 1, 2026

BDA Apartments

Home Front Page ಹೆಣದ ಮೇಲೆ ರಾಜಕೀಯ ಮಾಡೋದು ಬಿಜೆಪಿಯವರ ಕೆಲಸ- ಡಿಸಿಎಂ ಡಿಕೆ ಶಿವಕುಮಾರ್

ಹೆಣದ ಮೇಲೆ ರಾಜಕೀಯ ಮಾಡೋದು ಬಿಜೆಪಿಯವರ ಕೆಲಸ- ಡಿಸಿಎಂ ಡಿಕೆ ಶಿವಕುಮಾರ್

ಬೆಂಗಳೂರು,ಜೂನ್,16,2025 (www.justkannada.in): ದುರಂತಗಳ ಸಂದರ್ಭದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದವರು ರಾಜಕೀಯವಾಗಿ ಮಾತನಾಡುತ್ತಾರೆ. ಹೆಣದ ಮೇಲೆ ರಾಜಕೀಯ ಮಾಡೋದು ಬಿಜೆಪಿಯವರ ಕೆಲಸ ಎಂದು ಡಿಸಿಎಂ ಡಿಕೆ ಶಿವಕುಮಾರ್ ಕಿಡಿಕಾರಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್,  ಅಹಮದಾಬಾದ್ ವಿಮಾನ ದುರಂತ ಆಗಬಾರದಿತ್ತು. ಯಾವ ದೇಶದಲ್ಲೂ ಇಂತಹ ಘಟನೆ ಆಗಬಾರದು. ಕೆಲವರಿಗೆ ಸುಟ್ಟು ಗಾಯ ಆಗಿದೆ, ಇನ್ಫೆಕ್ಷನ್ ಆಗುತ್ತೆ ಅಂತ ತೋರಿಸೋಕೆ ಹೋಗಿಲ್ಲ ಎಂದು ತಿಳಿಸಿದರು.

ನಾವು ಹೆಣದ ಮೇಲೆ ರಾಜಕೀಯ ಮಾಡಲ್ಲ ಹೆಣದ ಮೇಲೆ ರಾಜಕೀಯ ಮಾಡೋದು ಬಿಜೆಪಿಯವರ ಕೆಲಸ. ಅಹಮದಾಬಾದ್ ವಿಮಾನ ದುರಂತದ ಬಗ್ಗೆ ತನಿಖೆ ನಡೆಯುತ್ತಿದೆ. ಅದೇ ರೀತಿ ಬೆಂಗಳೂರು ಕಾಲ್ತುಳಿತ  ತನಿಖೆ ನಡೆಯುತ್ತಿದೆ. ತನಿಖೆ ನಡೆಯುವಾಗ ರಾಜಕೀಯ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.vtu

Key words: BJP, job, politics, DCM, DK Shivakumar