ನಿಂತಿದ್ದ ವಾಹನಕ್ಕೆ ಡಿಕ್ಕಿ: ಬೈಕ್ ಸವಾರ ಸಾವು

ಮೈಸೂರು, ನವೆಂಬರ್ 7, 2021: ನಿಂತಿದ್ದ ವಾಹನಕ್ಕೆ ಬೈಕ್ ಡಿಕ್ಕಿ ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆ ತಿ.ನರಸೀಪುರ ತಾಲೂಕಿನ ಆಲಗೂಡು ಸಮೀಪ ನಡೆದಿದೆ.

ಸತೀಶ್ (34) ಮೃತಪಟ್ಟ ದುರ್ದೈವಿ. ಗಂಭೀರ ಗಾಯಗೊಂಡ ಹಿಂಬದಿ ಬೈಕ್ ಸವಾರ (ರಘು) ಹೆಚ್ಚಿನ ಚಿಕಿತ್ಸೆಗೆ ಮೈಸೂರು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಇವರು ಚಾಮರಾಜನಗರ ಜಿಲ್ಲೆಯ ಕಮ್ಮರವಾಡಿ ಗ್ರಾಮದ ನಿವಾಸಿಗಳು. ಸ್ಥಳಕ್ಕೆ ತಿ. ನರಸೀಪುರ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ತಿ.ನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.