Saturday, September 12, 2026

BDA Apartments

ಭೀಕರ ರಸ್ತೆ ಅಪಘಾತ: ಸ್ಯಾಂಡಲ್ ವುಡ್ ನ ಯುವ ಖಳನಟನ ದುರಂತ ಅಂತ್ಯ BDA JK_Adv BDA Adv
Home Cinema ಭೀಕರ ರಸ್ತೆ ಅಪಘಾತ: ಸ್ಯಾಂಡಲ್ ವುಡ್ ನ ಯುವ ಖಳನಟನ ದುರಂತ ಅಂತ್ಯ

ಭೀಕರ ರಸ್ತೆ ಅಪಘಾತ: ಸ್ಯಾಂಡಲ್ ವುಡ್ ನ ಯುವ ಖಳನಟನ ದುರಂತ ಅಂತ್ಯ

ಬೆಂಗಳೂರು:ಜೂ-11:(www.justkannada.in) ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಅಭಿನಯದ ಭಜರಂಗಿ ಚಿತ್ರದಲ್ಲಿ ನಟಿಸಿದ್ದ ಯುವ ನಟನೊಬ್ಬ ಭೀಕರ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.

ಕುಮಾರ್ (24) ಮೃತ ನಟ ರಾಮನಗರ ಜಿಲ್ಲೆಯ ಕಗ್ಗಲೀಪುರ ಸಮೀಪದ ಗಾಂಧಿನಗರದ ಬಳಿ ಸಂಭವಿಸಿದ ಬೈಕ್ ಹಾಗೂ ಕಾರು ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಕುಮಾರ್ ಸಾವನ್ನಪ್ಪಿದ್ದಾರೆ.

ಕುಮಾರ್ ಭಜರಂಗಿ ಚಿತ್ರದಲ್ಲಿ ಖಳನಟನಾಗಿ ಅಭಿನಯಿಸಿದ್ದಾರೆ. ಬೈಕ್​ನಲ್ಲಿ ತೆರಳುತ್ತಿದ್ದ ವೇಳೆ ಬೊಲೆರೋ ಕಾರು ಡಿಕ್ಕಿ ಹೊಡೆದ ಪರಿಣಾಮ ಈ ದುರಂತ ಸಂಭವಿಸಿದೆ. ಗಂಭೀರವಾಗಿ ಗಾಯಗೊಂಡಿದ್ದ ಕುಮಾರ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿದ ಕಗ್ಗಲೀಪುರ ಠಾಣಾ ಪೊಲೀಸರು ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಭೀಕರ ರಸ್ತೆ ಅಪಘಾತ: ಸ್ಯಾಂಡಲ್ ವುಡ್ ನ ಯುವಖಳನಟನ ದುರಂತ ಅಂತ್ಯ
Bike accident,sandalwood youth villain,death,ramanagar