Tuesday, September 29, 2026

BDA Apartments

ಬಿಹಾರ ಸಿಎಂ ನಿತೀಶ್ ಕುಮಾರ್ ರಾಜೀನಾಮೆ: ಜೆಡಿಯು-ಬಿಜೆಪಿ ಸರ್ಕಾರ ಪತನ BDA JK_Adv BDA Adv
Home Front Page ಬಿಹಾರ ಸಿಎಂ ನಿತೀಶ್ ಕುಮಾರ್ ರಾಜೀನಾಮೆ: ಜೆಡಿಯು-ಬಿಜೆಪಿ ಸರ್ಕಾರ ಪತನ.

ಬಿಹಾರ ಸಿಎಂ ನಿತೀಶ್ ಕುಮಾರ್ ರಾಜೀನಾಮೆ: ಜೆಡಿಯು-ಬಿಜೆಪಿ ಸರ್ಕಾರ ಪತನ.

ಬಿಹಾರ,ಆಗಸ್ಟ್,9,2022(www.justkannada.in):  ಬಿಹಾರದಲ್ಲಿ ರಾಜಕೀಯ ಹೈಡ್ರಾಮಾ ನಡೆದಿದ್ದು ಬಿಜೆಪಿ-ಜೆಡಿಯು ಸರ್ಕಾರ ಪತನವಾಗಿದೆ. ಸಿಎಂ ಸ್ಥಾನಕ್ಕೆ ನಿತೀಶ್ ಕುಮಾರ್ ರಾಜೀನಾಮೆ ಸಲ್ಲಿಸಿದ್ಧಾರೆ.

ಇಂದು ರಾಜಭವನದಲ್ಲಿ ರಾಜ್ಯಪಾಲರನ್ನು ಭೇಟಿಯಾದ ನಿತೀಶ್ ಕುಮಾರ್ ಸಿಎಂ ಸ್ಥಾನಕ್ಕೆ ರಾಜೀನಾಮೆ  ಸಲ್ಲಿಸಿದ್ದಾರೆ. ಈ ಮೂಲಕ ಬಿಹಾರದಲ್ಲಿ ಬಿಜೆಪಿ- ಜೆಡಿಯು ಮೈತ್ರಿ ಅಂತ್ಯಗೊಂಡಿದೆ. ಬಿಜೆಪಿಯೊಂದಿಗಿನ ಮೈತ್ರಿಯನ್ನು ಮುರಿದುಕೊಂಡಿರುವ ಜೆಡಿಯು ಅಧ್ಯಕ್ಷ ಹಾಗೂ ಸಿಎಂ ನಿತೀಶ್ ಕುಮಾರ್ ಅವರು ತೇಜಸ್ವಿ ಯಾದವ್ ಅವರೊಂದಿಗೆ ರಾಜ್ಯಪಾಲರನ್ನು ಭೇಟಿಯಾಗಿ  ರಾಜೀನಾಮೆ ಪತ್ರವನ್ನು ಸಲ್ಲಿಸಿದರು.ಬಿಹಾರ ಸಿಎಂ ನಿತೀಶ್ ಕುಮಾರ್ ರಾಜೀನಾಮೆ nitish kumar

ಬಳಿಕ ಹೊಸ ಸರ್ಕಾರ ರಚನೆಗೆ ಹಕ್ಕು ಮಂಡಿಸಿ ಆರ್ ಜೆಡಿ ಬೆಂಬಲ ಪತ್ರವನ್ನ ರಾಜ್ಯಪಾಲರಿಗೆ ನಿತೀಶ್ ಕುಮಾರ್ ಸಲ್ಲಿಸಿದರು. ಆರ್ ಜೆಡಿ, ಕಾಂಗ್ರೆಸ್ ಜೊತೆ ಜೆಡಿಯು ಹೊಸ ಮೈತ್ರಿ ಮಾಡಿಕೊಳ್ಳಲಿದ್ದು 48 ಗಂಟೆಗಳಲ್ಲಿ ಮಹಾಘಟಬಂಧನ್ 2.0 ಸರ್ಕಾರ ರಚನೆಯಾಲಿದೆ.

Key words: Bihar -CM -Nitish Kumar -resigns.